ನಿತೀಶ್ ಕಟಾರಾ ಕೊಲೆ ಪ್ರಕರಣದ ನ್ಯಾಯಾಂಗೀಯ ವಿಚಾರಣೆಯನ್ನು ನವದೆಹಲಿಯ ವಿಚಾರಣಾ ನ್ಯಾಯಾಲಯವು ಬುಧವಾರದಿಂದ ಪ್ರತಿದಿನ ಆರಂಭಿಸಿದೆ.
ಕಳೆದ ಮಾರ್ಚ್ 26ರಂದು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವಿಂದರ್ ಕೌಲ್ ಅವರು ಕಕ್ಷಿದಾರರ ಪರ ವಾದಿಸುತ್ತಿರುವ ನ್ಯಾಯವಾದಿ ಜಿ.ಕೆ ಭಾರತಿ ಅವರು ಅನವಶ್ಯಕವಾಗಿ 2002ರಲ್ಲಿ ನಡೆದ ನಿತೀಶ್ ಕಟಾರಾ ಕೊಲೆಯ ವಿಚಾರಣೆಯನ್ನು ಮುಂದೂಡುತ್ತಿದ್ದಾರೆ ಎಂದು ಆರೋಪಿಸಿ, ಎಪ್ರಿಲ್ 15ರೊಳಗೆ ತಮ್ಮ ಅಂತಿಮ ವಾದವನ್ನು ಮಂಡಿಸಬೇಕು ಎಂದು ಆದೇಶಿಸಿದ್ದಾರೆ.
ಸರಕಾರ ಪರ ವಾದಿಸುತ್ತಿರುವ ವಕೀಲರು ಡಿಸೆಂಬರ್ 2007ರಲ್ಲಿ ತಮ್ಮ ಅಂತಿಮ ವಾದವನ್ನು ಮಂಡಿಸಿದ್ದಾರೆ.
ರಾಜ್ಯಸಭಾ ಸದಸ್ಯ ಡಿ.ಪಿ. ಯಾದವ್ ಅವರ ಪುತ್ರಿ ಭಾರತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಶಂಕೆಯ ಮೇಲೆ ವಿಕಾಸ್ ಯಾದವ್ ಮತ್ತು ವಿಶಾಲ್ ಯಾದವ್ ಅವರುಗಳು ನಿತೀಶ್ ಕಟಾರಾರನ್ನು 2007ರ ಫೆಬ್ರವರಿ 16 ಮತ್ತು 17 ರ ನಡುವೆ ಹತ್ಯೆ ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಆರೋಪ ಸಲ್ಲಿಸಲಾಗಿದೆ.
|