ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯಲ್ಲಿ ತಾನು ಮೂಗು ತೂರಿಸುವುದು ಸರಿಯಲ್ಲ. ದೇಶದಲ್ಲಿ ಇರುವ ಇಂಡಿಯನ್ ಇನ್ಸಟ್ಯೂಟ್ ಮ್ಯಾನೆಜಮೆಂಟ್ ಸಂಸ್ಥೆಗಳು ಬಡವರಿಗೆ ಯಾವ ರೀತಿ ಪ್ರವೇಶ ನೀಡುತ್ತವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ಅರ್ಜುನ್ ಸಿಂಗ್ ಸಿಎನ್ಎನ್‌ಗೆ ನೀಡಿದ ಸಂದರ್ಶನದಲ್ಲಿ ಕೇಳಿದ್ದಾರೆ.
ಕೆಲವು ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಮ್ಯಾನೆಜ್ಮಂಟ್ ಸಂಸ್ಥೆಗಳು ಪ್ರವೇಶ ಶುಲ್ಕದಲ್ಲಿ ಹೆಚ್ಚಳ ಮಾಡಿವೆ. ಅವುಗಳಲ್ಲಿ ಐಐಎಂ ಅಹ್ಮದಾಬಾದ್ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ನಾಲ್ಕು ಲಕ್ಷ ರೂಗಳಿಂದ 11.5 ಲಕ್ಷ ರೂಗಳಿಗೆ ಎರಿಸಿದೆ. ಇದೇ ರೀತಿ ಐಐಎಂ ಕೋಝಿಕೊಡೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಆರು ಲಕ್ಷ ರೂಗಳನ್ನು ಮುಂಬರುವ ಶೈಕ್ಷಣಿಕ ವರ್ಷದಿಂದ ನೀಡಬೇಕಾಗುತ್ತದೆ. ಇಂಡಿಯನ್ ಇನ್ಸಟಿಟ್ಯೂಟ್ ಆಪ್ ಟೆಕ್ನಾಲಜಿಗಳು ಕೂಡ ಶುಲ್ಕ ಹೆಚ್ಚಳ ಮಾಡುವ ಕುರಿತು ವಿಚಾರ ಮಾಡುತ್ತಿವೆ.
ಪ್ರವೇಶ ಶುಲ್ಕದಲ್ಲಿ ಮೂರು ಪಟ್ಟು ಹೆಚ್ಚಳ ಮಾಡಿರುವ ಐಐಎಂ ಅಹ್ಮದಾಬಾದ್‌ನ ಅಧಿಕಾರಿಗಳನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ಅವರು ಭೇಟಿಯಾಗುವ ನಿರೀಕ್ಷೆ ಇದೆ.
ಐಐಎಂ ಅಹ್ಮದಾಬಾದ್ ಆಡಳಿತ ಮಂಡಳಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ಅವರೊಂದಿಗೆ ಮಾತುಕತೆ ನಡೆಸಿ ಶುಲ್ಕ ಹೆಚ್ಚಳದಿಂದ ಆರ್ಥಿಕವಾಗಿ ಹಿಂದುಳಿದ ವರ್ಗದವರು ಪ್ರವೇಶದಿಂದ ವಂಚಿತರಾಗಬಹುದು ಎಂಬ ಆತಂಕವನ್ನು ಮಾನವ ಸಂಪನ್ಮೂಲ ಸಚಿವರು ವ್ಯಕ್ತಪಡಿಸಿದ್ದಾರೆ.
|