ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಮಿಳ್ನಾಡಿನಲ್ಲಿ ಕನ್ನಡ ಚಾನೆಲ್‌ಗಳಿಗೆ ಕತ್ತರಿ
NRB
ಮುಯ್ಯಿಗೆ ಮುಯ್ಯಿ ಎಂಬಂತೆ, ಕರ್ನಾಟಕದಲ್ಲಿ ತಮಿಳು ಚಿತ್ರ ಪ್ರದರ್ಶನ ಹಾಗೂ ತಮಿಳು ಚಾನೆಲ್‌ಗಳ ಪ್ರಸಾರವನ್ನು ಸ್ಥಳೀಯ ಕೇಬಲ್ ಆಪರೇಟರ್‌ಗಳು ಬಂದ್ ಮಾಡಿರುವುದಕ್ಕೆ ಪ್ರತಿಯಾಗಿ ತಮಿಳ್ನಾಡಿನಲ್ಲಿಯೂ ಕನ್ನಡ ಚಾನೆಲ್‌ಗಳ ಪ್ರಸಾರವನ್ನು ತಡೆಯುವಂತೆ ಹೇಳಲಾಗಿದೆ. ಕರ್ನಾಟಕದಲ್ಲಿ ಮಂಗಳವಾರ ಸಂಜೆಯಿಂದ ತಮಿಳು ಚಾನೆಲ್‌ಗಳ ಪ್ರಸಾರವನ್ನು ತಡೆಹಿಡಿಯಲಾಗಿದೆ.

ಚುನಾವಣೆ ತನಕ ತಡೆಹಿಡಿಯಲಿ
ಏತನ್ಮಧ್ಯೆ, ಹೊಗೇನಕಲ್ ವಿಚಾರವನ್ನು ಪ್ರಧಾನಿಯ ಬಳಿಗೊಯ್ದಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಈ ವಿವಾದಾಸ್ಪದ ಯೋಜನೆಯನ್ನು ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ತನಕ ತಡೆಹಿಡಿಯಬೇಕು ಎಂದು ಹೇಳಿದ್ದಾರೆ.

"ಮುಂದಿನ ತಿಂಗಳಲ್ಲಿ ನಡೆಯುವ ಚುನಾವಣೆಯ ಬಳಿಕ ಅಸ್ತಿತ್ವಕ್ಕೆ ಬರಲಿರುವ ಹೊಸ ಸರಕಾರವು ರಾಜ್ಯದ ಹಿತಾಸಕ್ತಿಯನ್ನು ಸೂಕ್ತವಾಗಿ ರಕ್ಷಿಸಬಲ್ಲುದು. ಈ ಕುರಿತಂತೆ ಪ್ರಧಾನಿ ಮನಮೋಹನ್ ಸಿಂಗ್ ತಮಿಳ್ನಾಡಿನ ಮೇಲೆ ಪ್ರಭಾವ ಬೀರಬೇಕು ಎಂದು ಹೇಳಿರುವ ಕೃಷ್ಣ ತಮಿಳ್ನಾಡು ಮುಖ್ಯಮಂತ್ರಿಗಳು ಪ್ರಯೋಗಿಸಿರುವ ಕಟುಭಾಷೆಯು ಅನಿರೀಕ್ಷಿತವಾಗಿದೆ, ಇದು ಕನ್ನಡ ಕಾರ್ಯಕರ್ತರನ್ನು ಪ್ರಚೋದಿಸಿದೆ" ಎಂದು ಕೃಷ್ಣ ಹೇಳಿದ್ದಾರೆ.

ತಮಿಳು ಚಿತ್ರ ಪ್ರದರ್ಶನಕ್ಕೆ ತಡೆ ಒಡ್ಡುತ್ತಿರುವ 'ಭಾಷಾ ದುರಭಿಮಾನಿ'ಗಳನ್ನು ತಡೆದು, ತಮಿಳರ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಸರಕಾರ ಹಸ್ತಕ್ಷೇಪ ನಡೆಸಬೇಕು ಎಂದು ತಮಿಳ್ನಾಡು ಕೇಂದ್ರವನ್ನು ವಿನಂತಿಸಿದೆ. ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಕೇಂದ್ರವನ್ನು ಮಂಗಳವಾರ ಒತ್ತಾಯಿಸಿದ್ದರು.
ಮತ್ತಷ್ಟು
ಮನದಲ್ಲಿ ನೆನೆದು ನೋಡಿ ಬಡ ವಿದ್ಯಾರ್ಥಿಯನ್ನ
ಕಟಾರಾ ಪ್ರಕರಣ ನಿರಂತರ ವಿಚಾರಣೆ
ಮಾಯಾವತಿ ವಿರುದ್ಧ ಹೇಳಿದ್ದು ತಪ್ಪು: ಟಿಕೈಟ್
ಸ್ಕಾರ್ಲೇಟ್ ಕೊಲೆ ಸಿಬಿಐಗೆ ಹಸ್ತಾಂತರ
ಗೋವಾ: ಅನಿವಾಸಿ ಭಾರತೀಯಳ ಮೇಲೆ ಅತ್ಯಾಚಾರ
ತಮಿಳರ ರಕ್ಷಣೆಗೆ ಕೇಂದ್ರಕ್ಕೆ ಮನವಿ