ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರದಕ್ಷಿಣೆ ಪ್ರಕರಣ: ಹೈಕೋರ್ಟಿಗೆ ಸುಪ್ರೀಂಕೋರ್ಟ್ ತರಾಟೆ
ವರದಕ್ಷಿಣೆ ಪ್ರಕರಣಗಳನ್ನು ಅನವಶ್ಯಕವಾಗಿ ಉಚ್ಚ ನ್ಯಾಯಾಲಯಗಳು ಕೈಬಿಡುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ವರದಕ್ಷಿಣೆಗೆ ಪೀಡಿಸಿದ ಅಪರಾಧಿಗಳ ವಿರುದ್ಧ ಪ್ರಕರಣದ ವಿಚಾರಣೆಯನ್ನು ಕೈಬಿಡಬೇಕು ಇಲ್ಲದೇ ಹೋದಲ್ಲಿ ಮಹಿಳೆಯರಿಗೆ ಅನ್ಯಾಯ ಎಸಗಿದಂತೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.

ನ್ಯಾಯಮೂರ್ತಿ ಅರಿಜಿತ್ ಪಸಾಯತ್, ಸಿ.ಕೆ ಥಕ್ಕರ್ ಮತ್ತು ಎಲ್ ಎಸ್ ಪಾಂಟಾ ಅವರನ್ನು ಒಳಗೊಂಡ ಮೂವರ ಸದಸ್ಯರ ವಿಚಾರಣಾ ಪೀಠವು ಪ್ರಕರಣ ಕೈಬಿಡುವ ಅಧಿಕಾರದ ಬಳಕೆಯ ಸಂದರ್ಭದಲ್ಲಿ ನ್ಯಾಯಾಲಯವು ಆದಷ್ಟು ಎಚ್ಚರ ವಹಿಸಬೇಕು. ವಿಚಾರಣೆಯನ್ನು ಅಂತ್ಯಗೊಳಿಸುವ ಏಕೈಕ ಉದ್ದೇಶದಿಂದ ಪ್ರಕರಣಕ್ಕೆ ತೆರೆ ಎಳೆಯಬಾರದು. ಈ ರೀತಿ ಮಾಡುವುದರಿಂದ ವ್ಯಕ್ತಿಯೋರ್ವನ ಕಾನೂನು ಬದ್ಧ ಹಕ್ಕಿಗೆ ಭಂಗ ತಂದಂತೆ ಆಗುತ್ತದೆ ಎಂದು ಹೇಳಿದೆ.

ರಾಜ್ಯ ಮಟ್ಟದಲ್ಲಿ ಉಚ್ಚ ನ್ಯಾಯಾಲಯಗಳು ಆಗಿರುವ ಹೈಕೋರ್ಟ್‌ಗಳು ಪ್ರಕರಣದ ಎಲ್ಲ ಅಂಶಗಳನ್ನು ತೀರ್ಪು ನೀಡುವ ಮುನ್ನ ಗಣನೆಗೆ ತೆಗೆದುಕೊಂಡು ತೀರ್ಪು ಪ್ರಕಟಿಸಬೇಕು. ಪ್ರಕರಣವೊಂದರಲ್ಲಿ ಎಲ್ಲ ಮಾಹಿತಿ ಗೊಂದಲದಿಂದ ಕೂಡಿದ್ದು ಸೂಕ್ತ ತೀರ್ಮಾನಕ್ಕೆ ಬರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಎದುರು ಹಾಜರು ಪಡಿಸದೇ ಇದ್ದಲ್ಲಿ ಅಂತಹ ಮೇಲ್ನೋಟಕ್ಕೆ ಕಾಣುವ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವ ತೀರ್ಮಾನದಿಂದ ಆದಷ್ಟು ದೂರ ಇರಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಪಾಟ್ನಾ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ರೇಣು ಕುಮಾರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಕೈಗೆತ್ತಿಕೊಂಡು ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಈ ರೀತಿ ಅನಿಸಿಕೆ ವ್ಯಕ್ತಪಡಿಸಿತು. ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಪಾಟ್ನಾ ಉಚ್ಚನ್ಯಾಯಾಲಯಕ್ಕೆ ಪರಿತ್ಯಕ್ತ ಪತಿ ಮತ್ತು ಮಾವನ ವಿರುದ್ಧ ಮನವಿ ಸಲ್ಲಿಸಿದ್ದಳು. ವಿಚಾರಣೆ ನಡೆಸಿದ ಪಾಟ್ನಾ ಹೈಕೋರ್ಟ್ ರೇಣುಕುಮಾರಿ ಸಲ್ಲಿಸಿದ್ದ ಅರ್ಜಿಯಲ್ಲಿ ಹುರುಳಿಲ್ಲ ಎಂದು ವಜಾಗೊಳಿಸಿತ್ತು.

ಅಪರಾಧ ದಂಡ ಸಂಹಿತೆ ಕಲಂ 482ರ ಅನ್ವಯ ಪತಿ ರಾಜೇಶ್ ಕುಮಾರ್ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ನ್ಯಾಯಾಲಯ ಕೈಬಿಟ್ಟಿತ್ತು. ಕಲಂ 482ರ ಅನ್ವಯ ನ್ಯಾಯಾಲಯವು ಅಪರಾಧಿಯ ವಿರುದ್ಧ ಸಲ್ಲಿಸಿರುವ ಮನವಿಯನ್ನು ಕೈಬಿಡಬಹುದು.
ಮತ್ತಷ್ಟು
ತಮಿಳ್ನಾಡಿನಲ್ಲಿ ಕನ್ನಡ ಚಾನೆಲ್‌ಗಳಿಗೆ ಕತ್ತರಿ
ಮನದಲ್ಲಿ ನೆನೆದು ನೋಡಿ ಬಡ ವಿದ್ಯಾರ್ಥಿಯನ್ನ
ಕಟಾರಾ ಪ್ರಕರಣ ನಿರಂತರ ವಿಚಾರಣೆ
ಮಾಯಾವತಿ ವಿರುದ್ಧ ಹೇಳಿದ್ದು ತಪ್ಪು: ಟಿಕೈಟ್
ಸ್ಕಾರ್ಲೇಟ್ ಕೊಲೆ ಸಿಬಿಐಗೆ ಹಸ್ತಾಂತರ
ಗೋವಾ: ಅನಿವಾಸಿ ಭಾರತೀಯಳ ಮೇಲೆ ಅತ್ಯಾಚಾರ