ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನಾ ವಿರೋಧಿ ನೀತಿ ಸಹಿಸುವುದಿಲ್ಲ-ಪ್ರಣಬ್
ಭಾರತ ತನ್ನ ನೆಲದಲ್ಲಿ ಟಿಬೆಟಿಯನ್ನರು ಚೀನಾವಿರೋಧಿ ಚಟುವಟಿಕೆಗಳನ್ನು ನಡೆಸುವುದನ್ನು ಸಹಿಸುವುದಿಲ್ಲ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಚೀನಾಗೆ ಭರವಸೆ ನೀಡಿದ್ದಾರೆ.

ಚೀನಾ ಟಿಬೆಟ್‌ ಸಮಸ್ಯೆ ಕುರಿತಂತೆ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವ ಯಾಂಗ್ ಜಿಯಾಚಿ ದೂರವಾಣಿ ಮೂಲಕ ಪ್ರಣಬ್ ಮುಖರ್ಜಿ ಅವರೊಂದಿಗೆ ಮಾತುಕತೆ ನಡೆಸಿ ಚೀನಾ ನಿಲುವನ್ನು ತಿಳಿಸಿದ್ದಾರೆ ಎಂದು ಚೀನಾದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಟಿಬೆಟ್ ಚೀನಾದ ಅವಿಭಾಜ್ಯ ಅಂಗವಾಗಿದ್ದು ಭಾರತೀಯ ನೆಲದಲ್ಲಿ ಟಿಬೆಟಿಯನ್ನರು ಚೀನಾ ವಿರೋಧಿ ನೀತಿಗಳನ್ನು ಭಾರತ ಸಹಿಸುವುದಿಲ್ಲ ಎಂದು ಚೀನಾ ದೇಶಕ್ಕೆ ಪ್ರಣಬ್ ಮುಖರ್ಜಿ ಭರವಸೆ ನೀಡಿದ್ದಾರೆ.

ಚೀನಾದೇಶದವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಅವರ ಸಂಚು ವಿಫಲವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ಯಾಂಗ್ ಜಿಯಾಚಿ ಅವರು ಸಚಿವ ಪ್ರಣಬ್ ಮುಖರ್ಜಿ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಹಿಜ್‌ಬುಲ್ ಮುಜಾಹಿದಿನ್ ನಾಯಕ ಬಂಧನ
ಅಂಧ್ರ ಪ್ರದೇಶ: ಅವಿಶ್ವಾಸ ಮತಯಾಚನೆಗೆ ಸೋಲು
ವರದಕ್ಷಿಣೆ ಪ್ರಕರಣ: ಹೈಕೋರ್ಟಿಗೆ ಸುಪ್ರೀಂಕೋರ್ಟ್ ತರಾಟೆ
ತಮಿಳ್ನಾಡಿನಲ್ಲಿ ಕನ್ನಡ ಚಾನೆಲ್‌ಗಳಿಗೆ ಕತ್ತರಿ
ಮನದಲ್ಲಿ ನೆನೆದು ನೋಡಿ ಬಡ ವಿದ್ಯಾರ್ಥಿಯನ್ನ
ಕಟಾರಾ ಪ್ರಕರಣ ನಿರಂತರ ವಿಚಾರಣೆ