ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಸು, ಸುರ್ಜಿತ್ ನಿರ್ಗಮನ, ಕಾರಟ್ ಪುನರಾಯ್ಕೆ
ಕೊಯಿಮುತ್ತೂರಿನಲ್ಲಿ ನಡೆದ 19ನೇಯ ಕಾರ್ಯಕಾರಿ ಅಧೀವೇಶನದಲ್ಲಿ ನಾಯಕರಾದ ಜ್ಯೋತಿ ಬಸು ಹಾಗೂ ಸುರ್ಜಿತ್ ನಿರ್ಗಮನದೊಂದಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಕಾರಟ್ ಅವರನ್ನು ಪುನರಾಯ್ಕೆಯಾಗಿ ಆಯ್ಕೆ ಮಾಡಲಾಗಿದೆ ಎಂದು ಸಿಪಿಐ(ಎಂ) ಮೂಲಗಳು ತಿಳಿಸಿವೆ.

19ನೇಯ ಕಾರ್ಯಕಾರಿ ಅಧೀವೇಶನದಲ್ಲಿ ಜ್ಯೋತಿ ಬಸು ಅವರನ್ನು ಪಾಲಿಟ್‌ಬ್ಯೂರೋ ಸಭೆಯ ವಿಶೇಷ ಗೌರವಾನ್ವಿತ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು,ಮಾಜಿ ಪ್ರಧಾನ ಕಾರ್ಯದರ್ಶಿ ಸುರ್ಜಿತ್ ಅವರನ್ನು ಕೇಂದ್ರ ಸಮಿತಿಯ ವಿಶೇಷ ಗೌರವಾನ್ವಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷ ವಿಭಜನೆಯ ನಂತರ ಸಿಪಿಐ(ಎಂ) ಪಕ್ಷ ಸ್ಥಾಪನೆಯಾಗಿ ಜ್ಯೋತಿ ಬಸು ಮತ್ತು ಸುರ್ಜಿತ್ 1964ರಿಂದ ನಿರಂತರವಾಗಿ ಕಳೆದ 44 ವರ್ಷಗಳಿಂದ ಪಾಲಿಟ್‌ಬ್ಯೂರೊದ ಸದಸ್ಯರಾಗಿದ್ದಾರೆ.

ನೂತನವಾಗಿ ರಚಿಸಲಾದ ಪಾಲಿಟ್‌ಬ್ಯೂರೋದಲ್ಲಿ ಆರ್‌.ಉಮಾನಾಥ್ ಅವರನ್ನು ಹೊರಹಾಕಲಾಗಿದ್ದು, ಕೇಂದ್ರ ಸಮಿತಿಯ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದು ಸಿಪಿಐ(ಎಂ) ಮೂಲಗಳು ತಿಳಿಸಿವೆ.

ಕೇರಳದ ಗೃಹಸಚಿವ ಕೊಡಿಯೇರಿ ಬಾಲಕೃಷ್ಣನ್ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಮಿನ್ ಮತ್ತು ಬಂಗಾಳದ ಸಚಿವ ನಿರುಪಮ್ ಸೇನ್ ಅವರನ್ನು 15 ಮಂದಿ ಸದಸ್ಯರ ಪಾಲಿಟ್‌ಬ್ಯೂರೋ ಸಮಿತಿಗೆ ನೇಮಕ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.



ಮತ್ತಷ್ಟು
ಚೀನಾ ವಿರೋಧಿ ನೀತಿ ಸಹಿಸುವುದಿಲ್ಲ-ಪ್ರಣಬ್
ಹಿಜ್‌ಬುಲ್ ಮುಜಾಹಿದಿನ್ ನಾಯಕ ಬಂಧನ
ಅಂಧ್ರ ಪ್ರದೇಶ: ಅವಿಶ್ವಾಸ ಮತಯಾಚನೆಗೆ ಸೋಲು
ವರದಕ್ಷಿಣೆ ಪ್ರಕರಣ: ಹೈಕೋರ್ಟಿಗೆ ಸುಪ್ರೀಂಕೋರ್ಟ್ ತರಾಟೆ
ತಮಿಳ್ನಾಡಿನಲ್ಲಿ ಕನ್ನಡ ಚಾನೆಲ್‌ಗಳಿಗೆ ಕತ್ತರಿ
ಮನದಲ್ಲಿ ನೆನೆದು ನೋಡಿ ಬಡ ವಿದ್ಯಾರ್ಥಿಯನ್ನ