ಸ್ಕಾರ್ಲೇಟ್ ಕೀಲಿಂಗ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ನಂತರ ಮೃತ ಬ್ರಿಟಿಷ್ ಯುವತಿಯ ತಾಯಿ ಫಿಯೊನಾ ಮ್ಯಾಕ್‌ವೊನ್ ಅವರು ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವುದರಿಂದ ಕೊಲೆಯ ಹಿಂದಿರುವ ಸತ್ಯ ಮರೆ ಮಾಚುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಫಿಯೊನಾ ಮ್ಯಾಕ್‌ವೊನ್ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವುದರಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಕಾರ್ಲೇಟ್ ಕೀಲಿಂಗ್‌ಳ ಪಾರ್ಥೀವ ಶರೀರವನ್ನು ಅಂತ್ಯ ಸಂಸ್ಕಾರಕ್ಕೆ ಇಂಗ್ಲೆಂಡ್‌ಗೆ ಫಿಯೊನಾ ತೆಗೆದುಕೊಂಡು ಹೋಗಿದ್ದಾರೆ. ಸರಿಯಾದ ಸಂಸ್ಥೆ ಮತ್ತು ವ್ಯಕ್ತಿಗಳು ಕೊಲೆಯ ತನಿಖೆ ನಡೆಸಲಿರುವುದರಿಂದ ಸತ್ಯಕ್ಕೆ ಅಪಚಾರವಾಗುವುದಿಲ್ಲ ಎಂದು ಹೇಳಿದ್ದಾರೆ.
|