ಬಿಜೆಪಿ ಮತ್ತು ಪಕ್ಷದ ಹಿರಿಯ ನಾಯಕರುಗಳು ಎಲ್ ಕೆ ಅಡ್ವಾಣಿ ಅವರು ಮಹ್ಮದ್ ಅಲಿ ಜಿನ್ನಾ ಕುರಿತು ನೀಡಿರುವ ಹೇಳಿಕೆಯ ವಿವಾದವನ್ನು ಅಂತ್ಯಗೊಳಿಸಿರಬಹುದು. ಸಂಘ ಪರಿವಾರದ ಪ್ರಮುಖ ಸಂಘಟನೆಯಾಗಿರುವ ವಿಎಚ್‌ಪಿ ಮಾತ್ರ ಈ ವಿವಾದ ಇನ್ನೂ ಪರಿಹಾರವಾಗಿಲ್ಲ ಎಂದು ಹೇಳಿದೆ.
ಬರಲಿರುವ ವಿಕ್ರಮ ಸಂವತ್ಸರದ ಅಂಗವಾಗಿ ನವದೆಹಲಿಯಲ್ಲಿನ ಕೇಂದ್ರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಔತಣ ಕೂಟದಲ್ಲಿ ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕ ಅಶೋಕ್ ಸಿಂಘಾಲ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಜಿನ್ನಾ ಜಾತ್ಯಾತೀತ ನಿಲುವಿನ ವ್ಯಕ್ತಿ ಎಂದು ನೀಡಿದ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿದ್ದಾರೆ.
ಇದೇ ಸಮಾರಂಭದಲ್ಲಿ ಉಪಸ್ಥಿತರಿದ್ದ ಪರಿಷತ್‌ನ ಇನ್ನೊರ್ವ ಹಿರಿಯ ನಾಯಕ ವಿಷ್ಣು ಹರಿ ದಾಲ್ಮಿಯಾ ಅವರು ಜಿನ್ನಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಅಂಶವನ್ನು ಅಡ್ವಾಣಿ ಹೇಳಿದ್ದಾರೆ ವಿನಃ ಜಿನ್ನಾ ಜಾತ್ಯಾತೀತ ನಿಲುವಿನ ವ್ಯಕ್ತಿ ಎಂದು ತಮ್ಮ ಸ್ವಂತ ಅಭಿಪ್ರಾಯವನ್ನು ಮಂಡಿಸಿಲ್ಲ. ಹೀಗಾಗಿ ಈ ಹೇಳಿಕೆಯಲ್ಲಿ ವಿವಾದ ಅನ್ನುವುದು ಇಲ್ಲ ಎಂದು ಸಿಂಘಾಲ್ ಪಕ್ಕದಲ್ಲಿ ಕುಳಿತಿದ್ದ ದಾಲ್ಮಿಯಾ ಹೇಳಿದ್ದಾರೆ.
|