ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೆ ಎಬ್ಬಿಸುವಂಥದ್ದೇನೂ ಹೇಳಿಲ್ಲ: ಕರುಣಾನಿಧಿ
ಹೊಗೇನಕಲ್ ನೀರಿನ ಯೋಜನೆಗೆ ಸಂಬಂಧಿಸಿ ತಮ್ಮ ಹೇಳಿಕೆಯು ವಿಕೋಪಕ್ಕೆ ತಿರುಗಿರುವುದರ ಬಗ್ಗೆ ಕೊಂಚ ವಿಚಲಿತರಾದಂತೆ ಕಂಡುಬಂದಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕಳುಹಿಸಿರುವ ಪತ್ರವೊಂದರಲ್ಲಿ, ಕನ್ನಡಿಗರ ವಿರುದ್ಧ ತಾವು ಯಾವುದೇ ರೀತಿಯಲ್ಲೂ ಕೆಟ್ಟದಾಗಿ ಮಾತನಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಇದೇ ವಿಷಯದ ಕುರಿತು ಭೇಟಿ ಮಾಡಿದ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೂ ಗುರುವಾರ ಈ ಪತ್ರದ ಪ್ರತಿಯನ್ನು ಕರುಣಾನಿಧಿ ಕಳುಹಿಸಿದ್ದಾರೆ.

ನಾನು ಬಹಿರಂಗವಾಗಿಯಾಗಲೀ ಅಥವಾ ಏಪ್ರಿಲ್ 1ರಂದು ರಾಜ್ಯ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯದಲ್ಲಾಗಲೀ, ಕನ್ನಡಿಗರ ವಿರುದ್ಧ ಯಾವುದೇ ರೀತಿಯ ಕೆಟ್ಟ ಶಬ್ದಗಳನ್ನು ಪ್ರಯೋಗಿಸಿಲ್ಲ. ನೆರೆರಾಜ್ಯದಲ್ಲಿ ತಮಿಳುನಾಡಿನ ಬಸ್ಸುಗಳನ್ನು ಸುಟ್ಟಾಗ, ತಮಿಳು ಸಿನಿಮಾ ಮಂದಿರಗಳಲ್ಲಿ ದಾಂಧಲೆ ಎಬ್ಬಿಸಿದಾಗ ಮತ್ತು ಅಲ್ಲಿರುವ ತಮಿಳರಿಗೆ ತೊಂದರೆಯಾದಾಗ, ಮುಖ್ಯಮಂತ್ರಿಯೊಬ್ಬ ಸುಮ್ಮನೆ ಕೂರುವುದು ಸಾಧ್ಯವಿಲ್ಲ ಎಂದು ಕರುಣಾನಿಧಿ ಪತ್ರದಲ್ಲಿ ಹೇಳಿದ್ದಾರೆ.

ಹಿರಿಯ ಮುತ್ಸದ್ಧಿ ಎಂದು ಭಾವಿಸಿದ್ದ ಕರುಣಾನಿಧಿಯವರು ಬಳಸಿದ ಕೆಟ್ಟ ಶಬ್ದಗಳೇ ಅನಾರೋಗ್ಯಕರ ಬೆಳವಣಿಗೆಗೆ ಕಾರಣವಾಯಿತು ಎಂಬ ಕೃಷ್ಣ ಹೇಳಿಕೆಯ ಬಗ್ಗೆ ಪತ್ರಕರ್ತರು ಕೇಳಿದಾಗ ಅವರು ಈ ವಿಷಯ ತಿಳಿಸಿದರು.

ನೀವು ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ. ಹಾಗಾಗಿ ಇಂತಹ ಪ್ರಚೋದನಕಾರಿ ಶಬ್ದಗಳು ನನ್ನ ಬಾಯಿಯಿಂದ ಬಂದಿದೆ ಎಂಬುದನ್ನು ನಂಬಲು ಅಥವಾ ಯೋಚಿಸಲೂ ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಿರುವ ಅವರು, ಈ ಯೋಜನೆಗೆ ಹಿಂದೆಯೇ ಕೇಂದ್ರ ಮತ್ತು ಕರ್ನಾಟಕ ಒಪ್ಪಿಗೆ ಸೂಚಿಸಿತ್ತು ಎಂದು ಹೇಳಿದರು.

ಆ ರಾಜ್ಯದ ಕೆಲವು ರಾಜಕಾರಣಿಗಳು ಈ ವಿಷಯ ಹಿಡಿದು ರಾಜಕೀಯ ಲಾಭಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದವರು ಹೇಳಿದರಲ್ಲದೆ, ಅಂದಿನ ಕಾರ್ಯಕ್ರಮದ ನನ್ನ ಭಾಷಣವನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಕೇಳಿಕೊಂಡರೆ, ಯಾರು ಕೂಡ ನನ್ನ ಅದನ್ನು ತಪ್ಪಾಗಿ ಭಾವಿಸುವಂತಿರಲಿಲ್ಲ ಎಂದು ನುಡಿದರು.
ಮತ್ತಷ್ಟು
ದೆಹಲಿ : ಬಾಲೆಯ ಮೇಲೆ ಅತ್ಯಾಚಾರ, ಇಬ್ಬರ ಬಂಧನ
ಹೊಗೆ: ತಮಿಳು ಚಿತ್ರರಂಗದಿಂದಲೂ ಉಪವಾಸ
ಅಡ್ವಾಣಿ-ಜಿನ್ನಾ ವಿವಾದ ಪರಿಹಾರವಾಗಿಲ್ಲ: ವಿಎಚ್‌ಪಿ
ಚೆನ್ನೈ: ಕನ್ನಡಿಗರ ಹೋಟೆಲ್, ವಿಷ್ಣು ಫಾರ್ಮ್ ಹೌಸ್‌ಗೆ ದಾಳಿ
ಸಿಬಿಐನಿಂದ ನಿಷ್ಪಕ್ಷಪಾತ ತನಿಖೆ: ಫಿಯೋನಾ
ಬಸು, ಸುರ್ಜಿತ್ ನಿರ್ಗಮನ, ಕಾರಟ್ ಪುನರಾಯ್ಕೆ