ನವದೆಹಲಿ: ಕರ್ನಾಟಕ ಮತ್ತು ಜಾರ್ಖಂಡ್ ರಾಜ್ಯಗಳ ಸಾವಿರಾರು ಶಾಲೆಗಳಲ್ಲಿ ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ದಿ ಸಂಸ್ಥೆ ಹಾಗೂ ಯಿನಿಸೆಫ್ ಜಂಟಿಯಾಗಿ ಹಮ್ಮಿಕೊಂಡ ಪರಿಸರ ಸುರಕ್ಷೆ ಹಾಗೂ ನೈರ್ಮಲ್ಯ ಶಾಸ್ತ್ರದ ಅರಿವು ಮೂಡಿಸುವ ಯೋಜನೆ ಯಶಸ್ವಿಯಾಗಿದ್ದು, 2008 ಎಪ್ರಿಲ್ 4 ರಂದು ಯೋಜನೆಯ ಮುಕ್ತಾಯ ಸಮಾರಂಭವನ್ನು ಯುಎನ್‌ಡಿಪಿ ಮುಖ್ಯಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
2003-08ರವರೆಗೆ ಸುಮಾರು ಐದು ವರ್ಷಗಳ ಕಾಲ ನೈರ್ಮಲ್ಯ ಶಾಸ್ತ್ರ ಹಾಗೂ ಆರೋಗ್ಯ ಕುರಿತಂತೆ( ಸ್ವಾಸ್ಥ-ಪ್ಲಸ್ ) ಭಾರತ ಸರಕಾರ ಹಾಗೂ ರಾಜ್ಯಸರಕಾರಗಳ ಸಹಭಾಗಿತ್ವದಲ್ಲಿ ಶಾಲೆಗಳಿಗೆ ದೊರೆಯಬೇಕಾದ ಮೂಲಭೂತ ಸೌಕರ್ಯಗಳು ಆರೋಗ್ಯ ಕುರಿತಂತೆ ಇರುವ ಪಾಠಗಳನ್ನು 5500 ಶಾಲೆಗಳಲ್ಲಿ ತಿಳಿಸಿಕೊಡುವುದರೊಂದಿಗೆ 10 ಲಕ್ಷ ಮಕ್ಕಳಿಗೆ ಅರಿವು ಮೂಡಿಸಲಾಗಿದೆ ಎಂದು ಹೇಳಲಾಗಿದೆ.
ಸ್ವಾಸ್ಥ-ಪ್ಲಸ್ ಯೋಜನೆಯ ಅನುಷ್ಠಾನದಿಂದಾಗಿ ಶಾಲೆಗಳಲ್ಲಿ ಹೆಚ್ಚಿನ ಮಕ್ಕಳು ಹಾಜರಾಗಿರುವುದು ಕಂಡುಬಂದಿದೆ. ಅದರಲ್ಲಿ ಹೆಣ್ಣುಮಕ್ಕಳು ಪರಿಸರ ಸುರಕ್ಷೆ ಹಾಗೂ ನೈರ್ಮಲ್ಯ ಶಾಸ್ತ್ರದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ ಎಂದು ಸಂಸ್ಥೆ ಪ್ರಕಟಿಸಿದೆ. ಆರೋಗ್ಯ, ನೈರ್ಮಲ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಕೇವಲ ಶಾಲಾಕೋಣೆಗಳಲ್ಲಿ ಮಾತ್ರ ಕಲಿಸದೇ ಹೆಚ್ಚುವರಿ ಚಟುವಟಿಕೆಗಳಲ್ಲಿ ಕೂಡಾ ಪರಿಣಾಮಕಾರಿಯಾಗಿ ಸ್ಪಂದಿಸಿದೆ ಎಂದು ಯೋಜನೆಯ ಅಧಿಕಾರಿಗಳು ತಿಳಿಸಿದ್ದಾರೆ.
|