ದೆಹಲಿಯಿಂದ ಅಲಿಪುರ್ದ್ವಾರ್‌ಗೆ ಸಾಗುತ್ತಿದ್ದ ಮಹಾನಂದ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹದಿಹರೆಯದ ತರುಣಿಯ ಮೇಲೆ ದುಷ್ಕರ್ಮಿಗಳು ಗುಂಪು ಅತ್ಯಾಚಾರ ನಡೆಸಿರುವುದಾಗಿ ವರದಿಯಾಗಿದೆ.
ನಾಲ್ವರು ಶಸಸ್ತ್ರಧಾರಿ ವ್ಯಕ್ತಿಗಳು ಪಶ್ಚಿಮಬಂಗಾಳದ ಸಿಲಿಗುರಿಯಲ್ಲಿ ರೈಲೇರಿದ್ದು, ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ದೋಚಿದರು. ಬಳಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹುಡುಗಿಯನ್ನು ಟಾಯ್ಲೆಟ್ಟೆಗೆ ಎಳೆದೊಯ್ದು ಅಲ್ಲಿ ಈ ದುಷ್ಕೃತ್ಯ ಎಸಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಶಂಕಿತನೊಬ್ಬನನ್ನು ಬಂಧಿಸಲಾಗಿದೆ.
|