ಭ್ರಷ್ಟಾಚಾರ ಹಾಗೂ ದಾಖಲೆಗಳನ್ನು ತಿರುಚಿದ ಆರೋಪದಲ್ಲಿ ಬಂಧನಕ್ಕೀಡಾಗಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸುರೇಶ್ ನಂದ, ಆತನ ಪುತ್ರ ಹಾಗೂ ಇತರ ಇಬ್ಬರಿಗೆ ದೆಹಲಿಯ ನ್ಯಾಯಾಲಯವೊಂದು ಶನಿವಾರ ಜಾಮೀನು ನಿರಾಕರಿಸಿದೆ.
ಆರೋಪಿಗಳ ಜಾಮೀನು ಅರ್ಜಿಗಳನ್ನು ತಳ್ಳಿಹಾಕಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ. ಕೊಚಾರ್ ಅವರು "ತನಿಖೆಗಳು ಆರಂಭಿಕ ಹಂತದಲ್ಲಿದೆ ಮತ್ತು ಈ ಸಂದರ್ಭದಲ್ಲಿ ಬಿಡುಗಡೆಯ ವರದಿಯು ತನಿಖೆಗೆ ಅಡಚಣೆ ಉಂಟುಮಾಡಬಹುದು" ಎಂದು ನುಡಿದರು.
ಪ್ರಕರಣದಲ್ಲಿ ಆಪಾದಿತರಾದ ಸುರೇಶ್ ನಂದಾ, ಸಂಜೀವ್ ನಂದಾ, ಅವರ ಲೆಕ್ಕಪರಿಶೋಧಕ ಬಿಪಿನ್ ಶಾ ಮತ್ತು ಆದಾಯ ತೆರಿಗೆ ಉಪನಿರ್ದೇಶಕ(ತನಿಖೆ) ಅಶುತೋಷ್ ವರ್ಮಾ ಅವರುಗಳನ್ನು ಮಾರ್ಚ್ 8ರಂದು ಮುಂಬಯಿಯಲ್ಲಿನ ಹೊಟೇಲೊಂದರ ಮೇಲೆ ನಡೆಸಿದ ದಾಳಿ ವೇಳೆಗೆ ಬಂಧಿಸಲಾಗಿದೆ.
|