ತಮಿಳುನಾಡಿನ ಮಧುರೈ ಬಳಿಯಿರುವ ಕರೈಕುಡಿ ಪ್ರದೇಶದಲ್ಲಿ ರೈತರನ್ನು ಉದ್ದೇಶಿಸಿ ಸೋನಿಯಾಗಾಂಧಿ ಭಾಷಣ ಮಾಡುತ್ತಿರುವಾಗ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಆದರೆ ಸ್ಥಳಿಯ ಪೊಲೀಸರು ಅಂತಹ ಯಾವುದೇ ಘಟನೆ ನಡೆದಿಲ್ಲವೆಂದು ತಳ್ಳಿಹಾಕಿದ್ದಾರೆ.
ಘಟನೆಯ ಬಗ್ಗೆ ವಿವರಣೆ ನೀಡಿದ ವಿಶೇಷ ಭದ್ರತಾದಳದ ಅಧಿಕಾರಿ ಬಂಧೂಕುಧಾರಿಯನ್ನು ಬಂಧಿಸಿದ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ಸೋನಿಯಾಗಾಂಧಿ ಸುರಕ್ಷಿತವಾಗಿದ್ದು, ಭದ್ರತಾ ನೀತಿ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ರೈತ ಸಮೂಹವನ್ನು ಉದ್ದೇಶಿಸಿ ಮಾತನಾಡಲು ಸೋನಿಯಾ ಆಗಮನದ ಹಿನ್ನೆಲೆಯಲ್ಲಿ ಮಧುರೈನ ಕರೈಕುಡಿ ಪ್ರದೇಶದಲ್ಲಿ ಭಾರಿ ಬಿಗಿ ಭಧ್ರತೆಯನ್ನು ಏರ್ಪಡಿಸಲಾಗಿತ್ತು.
ಸೋನಿಯಾಗಾಂಧಿ ಅವರು ತಿರುಚಿಯಿಂದ ಕರೈಕುಡಿಗೆ ಹೆಲಿಕಾಪ್ಟರ್‌ನಲ್ಲಿ ಮಧ್ಯಾಹ್ನ 2.30ಕ್ಕೆ ಆಗಮಿಸಿ ಕರೈಕುಡಿಯಲ್ಲಿರುವ ಅಳಗಪ್ಪಾ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ತಂದೆ ಪಳನಿಯಪ್ಪ ಚೆಟ್ಟಿಯಾರ್ ನೆನಪಿಗಾಗಿ ಮೆಮೊರಿಯಲ್ ಹಾಲ್‌ನ್ನು ಉದ್ಘಾಟಿಸಿ ನಂತರ ರೈತ ಸಮೂಹವನ್ನು ಉದ್ದೇಶಿಸಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
|