ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಗ್‌ಬಿ ವಿರುದ್ದ ಠಾಕ್ರೆ ತರಾಟೆ,ರಜನಿಗೆ ಪ್ರಶಂಸೆ
ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಅವರನ್ನು ಗುರಿಯಾಗಿಸಿಕೊಂಡು ಶಿವಸೇನಾದ ಮುಖವಾಣಿಯಾದ ಸಾಮ್ನಾ ಪತ್ರಿಕೆಯಲ್ಲಿ ಲೇಖನವೊಂದು ಪ್ರಕಟಿಸಿದ್ದು ಹೊಗೇನಕಲ್‌ ನೀರಿನ ವಿವಾದ ಕುರಿತಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ ನಟ ರಜನಿಕಾಂತ್ ಅವರನ್ನು ಅನುಸರಿಸಬೇಕು ಎಂದು ಪ್ರಕಟಿಸಿದೆ.

ಮುಂಬೈನಲ್ಲಿ ನೆಲಸಿರುವ ಅನೇಕ ನಟರು ಬಾಲಿವುಡ್‌ನಲ್ಲಿ ಗೌರವ ಮತ್ತು ಖ್ಯಾತಿಯನ್ನು ಪಡೆದಿದ್ದಾರೆ. ಮರಾಠಿ ಅಥವಾ ಮಹಾರಾಷ್ಟ್ರ ರಾಜ್ಯದ ವಿಷಯಕ್ಕೆ ಬಂದಾಗ ಅಮಿತಾಬ್ ಸೇರಿದಂತೆ ಅನೇಕ ನಟರು ಹಿಮ್ಮುಖವಾಗಿದ್ದಾರೆ ಎಂದು ಸಾಮ್ನಾ ಪತ್ರಿಕೆಯಲ್ಲಿ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಲೇಖನವನ್ನು ಬರೆದಿದ್ದಾರೆ.

ಆದರೆ ನಟ ರಜನಿಕಾಂತ್ ಮಹಾರಾಷ್ಟ್ರ ಸಂಸ್ಕ್ರತಿಯನ್ನು ಬಿಂಬಿಸುವ ಅಪರೂಪದ ವ್ಯಕ್ತಿಯಾಗಿದ್ದಾರೆ. ಅವರಿಗೆ ಅನ್ನ, ಪ್ರಖ್ಯಾತಿ ನೀಡಿದ ರಾಜ್ಯಕ್ಕಾಗಿ ತೃಣ ಮಾತ್ರದ ಸೇವೆಯನ್ನು ಸಲ್ಲಿಸಲು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೊಗಳಿ ಅಟ್ಟಕ್ಕೇರಿಸಿದೆ.

ಸೂಪರ್‌ಸ್ಟಾರ್ ರಜನೀಕಾಂತ್ ಮಹರಾಷ್ಟ್ರದಲ್ಲಿ ಜನಿಸಿ ಕರ್ನಾಟಕದಲ್ಲಿ ಬೆಳೆದು ತಮಿಳುನಾಡಿನ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ನಟರಾಗಿದ್ದಾರೆ ಎಂದು ಲೇಖನದಲ್ಲಿ ಪ್ರಕಟಿಸಿದೆ.

ರಜನೀಕಾಂತ್ ನಿಷ್ಟಾವಂತ ವ್ಯಕ್ತಿ ಎನ್ನುವ ಲೇಖನದಲ್ಲಿ ಅಮಿತಾಬ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಮುಂಬೈನ ಬಾಲಿವುಡ್‌ನಲ್ಲಿ ನಟಿಸುತ್ತಿರುವ ನಟರಲ್ಲಿ ಮಹಾರಾಷ್ಟ್ರಕ್ಕಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಎಷ್ಟು ನಟರಿದ್ದಾರೆ ? ಎಂದು ಪ್ರಶ್ನಿಸಿದೆ.

ಮತ್ತಷ್ಟು
ಸೋನಿಯಾ ರಾಲಿಯಲ್ಲಿ ಬಂಧೂಕುಧಾರಿಯ ಬಂಧನ
ಅಮಿತಾಬ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಸೇನೆ
ನಂದಾಗಳಿಗೆ ಜಾಮೀನು ನಿರಾಕರಣೆ
ಹೊಗೇನಕಲ್ ಯೋಜನೆ ಮುಂದೂಡಿಕೆಗೆ ತ.ನಾ. ನಿರ್ಧಾರ
ರೈಲಿನಲ್ಲಿ ತರುಣಿಯ ಮೇಲೆ ಅತ್ಯಾಚಾರ
ಶಾಲಾ ನೈರ್ಮಲ್ಯ ತರಬೇತಿ ಕಾರ್ಯಕ್ರಮ