ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅದು ಆಟಿಕೆ ಪಿಸ್ತೂಲಂತೆ!
PTI
ಕಾರೈಕುಡಿ: ಮಧುರೈ ಸಮೀಪದ ಕಾರೈಕುಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಭಾಗವಸಿದ್ದ ರೈತಸಮಾವೇಶದಲ್ಲಿ 'ಬಂಧನ'ಕ್ಕೀಡಾಗಿರುವ 'ಬಂದೂಕುಧಾರಿ'ಯ ಬಳಿ ಇದ್ದುದು ಆಟಿಕೆ ಪಿಸ್ತೂಲಂತೆ!

ಲೋಹ ಶೋಧಯಂತ್ರದ ತಪಾಸಣೆ ವೇಳೆ ಈ ಬಂದೂಕು ಸಿವಶನ್ಮುಗವೇಲ್ ಎಂಬಾತನ ಬಳಿ ಪತ್ತೆಯಾಗಿತ್ತು. ಆತನನ್ನು ಪೊಲೀಸರು ತಕ್ಷಣ ಕರೆದೊಯ್ದರು. ಅದು ಲೋಡೆಡ್ ಪಿಸ್ತೂಲು ಎಂಬ ಪೊಲೀಸಧಿಕಾರಿಯ ಬೊಬ್ಬೆಯೂ ಆ ಕ್ಷಣದಲ್ಲಿ ಕೇಳಿ ಬಂದಿತ್ತು. ಆದರೆ ತಪಾಸಣೆಯ ಬಳಿಕ ಅದೊಂದು ಆಟಿಕೆಯ ಪಿಸ್ತೂಲು ಎಂದು ಹಿರಿಯ ಪೊಲೀಸಧಿಕಾರಿ ಹೇಳಿಕೆ ನೀಡಿದ್ದಾರೆ.

ಈ ಆಟಿಕೆ ಪಿಸ್ತೂಲು ಹೊಂದಿದ್ದ ವ್ಯಕ್ತಿಯನ್ನು ಕಾಂಗ್ರೆಸ್ ಕಾರ್ಯಕರ್ತನೆಂದು ಗುರುತಿಸಲಾಗಿದೆ. ಆತನನ್ನು ಭದ್ರತಾ ಕ್ಯಾಬಿನ್‌ಗೆ ಕರೆದೊಯ್ದು ವಿಶೇಷ ಗುಪ್ತಚರ ಘಟಕ ಸಿಬ್ಬಂದಿಗಳು ಹಾಗೂ ತಿರುಗ್ನಾನಮ್‌ ಎಸ್ಪಿ ವಿಚಾರಣೆ ನಡೆಸಿದರು.

ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ಕ್ಷೇತ್ರದಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಭಾಗವಹಿಸಲು ಸೋನಿಯಾ ಆಗಮಿಸುವ ಮೊದಲು ಈ ಘಟನೆ ಸಂಭವಿಸಿದೆ.
ಮತ್ತಷ್ಟು
ಬಿಗ್‌ಬಿ ವಿರುದ್ದ ಠಾಕ್ರೆ ತರಾಟೆ,ರಜನಿಗೆ ಪ್ರಶಂಸೆ
ಸೋನಿಯಾ ರಾಲಿಯಲ್ಲಿ ಬಂಧೂಕುಧಾರಿಯ ಬಂಧನ
ಅಮಿತಾಬ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಸೇನೆ
ನಂದಾಗಳಿಗೆ ಜಾಮೀನು ನಿರಾಕರಣೆ
ಹೊಗೇನಕಲ್ ಯೋಜನೆ ಮುಂದೂಡಿಕೆಗೆ ತ.ನಾ. ನಿರ್ಧಾರ
ರೈಲಿನಲ್ಲಿ ತರುಣಿಯ ಮೇಲೆ ಅತ್ಯಾಚಾರ