ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಿಸ್ ಇಂಡಿಯ ಯೂನಿವರ್ಸ್ ಪಟ್ಟಕ್ಕೆ ಸಿಮ್ರಾನ್ ಕೌರ್‌
ಅಂಧೇರಿ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮುಂಬೈನ ಸಿಮ್ರಾನ್ ಕೌರ್ ಮುಂಡಿ 2008ರ ಮಿಸ್ ಇಂಡಿಯ ಯೂನಿವರ್ಸ್ ಕಿರೀಟಧಾರಿಣಿಯಾಗಿದ್ದಾರೆ.

ಕೇರಳದ ಪಾರ್ವತಿ ಒಮನಕುಟ್ಟಂ ಮಿಸ್ ಇಂಡಿಯ ವರ್ಲ್ಡ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ ಮತ್ತು ಗೋವಾದ ಹರ್ಷಿತ್ ಸಕ್ಸೇನಾ ಮಿಸ್ ಇಂಡಿಯ ಅರ್ಥ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ವರ್ಷ ನಡೆಯುವ ವಿಶ್ವ ಸೌಂದರ್ಯ ಸ್ಪರ್ಧೆಯಲ್ಲಿ ಎಲ್ಲ ಮೂವರು ಸ್ಪರ್ಧಿಗಳು ದೇಶವನ್ನು ಪ್ರತಿನಿಧಿಸಲಿದ್ದಾರೆ.

ಫ್ಯಾಷನ್ ಮತ್ತು ಬಾಲಿವುಡ್‌ ಕ್ಷೇತ್ರದಿಂದ 28 ಅಂತಿಮ ಸ್ಪರ್ಧಾಳುಗಳು ನಡುವಿನಿಂದ ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಅವರನ್ನು ಆಯ್ಕೆ ಮಾಡಲಾಯಿತು.

ಸೌಂದರ್ಯ ಸ್ಪರ್ಧೆಯು ಸುಶ್ಮಿತಾ ಸೇನ್, ಐಶ್ವರ್ಯ ರೈ, ಲಾರಾ ದತ್ತಾ, ಪ್ರಿಯಾಂಕ ಛೋಪ್ರಾ ಮತ್ತು ದಿಯಾ ಮಿರ್ಝಾ ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತ್ತು.ಬಾಲಿವುಡ್ ನಟಿಯರಾದ ಕರೀನಾ ಕಪೂರ್, ಬಿಪಾಶಾ ಬಸು ಮತ್ತು ಸಮೀರಾ ರೆಡ್ಡಿಯ ಅತ್ಯಮೋಘ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿತು.
ಮತ್ತಷ್ಟು
ಅದು ಆಟಿಕೆ ಪಿಸ್ತೂಲಂತೆ!
ಬಿಗ್‌ಬಿ ವಿರುದ್ದ ಠಾಕ್ರೆ ತರಾಟೆ,ರಜನಿಗೆ ಪ್ರಶಂಸೆ
ಸೋನಿಯಾ ರಾಲಿಯಲ್ಲಿ ಬಂಧೂಕುಧಾರಿಯ ಬಂಧನ
ಅಮಿತಾಬ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಸೇನೆ
ನಂದಾಗಳಿಗೆ ಜಾಮೀನು ನಿರಾಕರಣೆ
ಹೊಗೇನಕಲ್ ಯೋಜನೆ ಮುಂದೂಡಿಕೆಗೆ ತ.ನಾ. ನಿರ್ಧಾರ