ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿಯಿಂದ ಸಂಪುಟ ವಿಸ್ತರಣೆ ?
ಕೇಂದ್ರ ಸಚಿವ ಸಂಪುಟದ ಪುನರ್ರಚನೆ ಅಂಗವಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಡುವೆ ಶನಿವಾರ ಮಾತುಕತೆ ನಡೆದಿದ್ದು, ಭಾನುವಾರ ಸಂಜೆ ಸಚಿವ ಸಂಪುಟದ ವಿಸ್ತರಣೆ ನಡೆಯಲಿರವುದಾಗಿ ಬಲ್ಲ ಮೂಲಗಳು ತಿಳಿಸಿವೆ.

ವಿಸ್ತರಿತ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಯುವ ನಾಯಕ ಮಧ್ಯಪ್ರದೇಶದ ಜ್ಯೋತಿರಾಧ್ಯ ಸಿಂಧ್ಯಾ, ಹಾಗೂ ಉತ್ತರಪ್ರದೇಶದ ಷಹಜಾನ್‌‌ಪುರ್ ಸಂಸದ ಜಿತಿನ್ ಪ್ರಸಾದ್ ಅವರು ಸೇರ್ಪಡೆ ಸಾಧ್ಯತೆ ಇರುವುದಾಗಿ ಪಕ್ಷದ ಮೂಲಗಳು ಹೇಳಿವೆ.

ಇಂದು ಸಂಜೆ ಪುನರ್ರಚನೆಯ ಬಳಿಕ 7ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

ಅಲ್ಲದೇ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿಯವರ ಪುತ್ರಿ ಕನಿಮೋಳಿ ಕೂಡ ಸಚಿವ ಸ್ಥಾನ ಪಡೆಯಲ್ಲಿದ್ದು, ಆರ್‌‌ಜೆಡಿಯ ಸಂಸಸದರೊಬ್ಬರು, ಅದರಂತೆ ಆಂಧ್ರಪ್ರದೇಶ ತೆಲಂಗಾಣ ಪ್ರದೇಶದ ಸಚಿವರೊಬ್ಬರು ಸಚಿವರಾಗಲಿದ್ದಾರೆ.
ಮತ್ತು ವಯಲಾರ್ ರವಿ ಅವರು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಮತ್ತಷ್ಟು
ಮಿಸ್ ಇಂಡಿಯ ಯೂನಿವರ್ಸ್ ಪಟ್ಟಕ್ಕೆ ಸಿಮ್ರಾನ್ ಕೌರ್‌
ಅದು ಆಟಿಕೆ ಪಿಸ್ತೂಲಂತೆ!
ಬಿಗ್‌ಬಿ ವಿರುದ್ದ ಠಾಕ್ರೆ ತರಾಟೆ,ರಜನಿಗೆ ಪ್ರಶಂಸೆ
ಸೋನಿಯಾ ರಾಲಿಯಲ್ಲಿ ಬಂಧೂಕುಧಾರಿಯ ಬಂಧನ
ಅಮಿತಾಬ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಸೇನೆ
ನಂದಾಗಳಿಗೆ ಜಾಮೀನು ನಿರಾಕರಣೆ