ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಪುಟ ಪುನಾರಚನೆ: ಅಯ್ಯರ್ ಸ್ಥಾನಕ್ಕೆ ಗಿಲ್
ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನಾರಚನೆಯು ಆಗಿದ್ದು, ಈ ಬಾರಿಯ ಸಚಿವ ಸಂಪುಟದ ಪುನಾರಚನೆಯ ಸಂದರ್ಭದಲ್ಲಿ ಯುವಕರಿಗೆ ಅವಕಾಶ ನೀಡುವ ಜೊತೆಗೆ ಕೇಂದ್ರ ಕ್ರೀಡಾ ಮತ್ತು ಯುವಜನ ಖಾತೆ ಸಚಿವರಾಗಿದ್ದ ಮಣಿ ಶಂಕರ್ ಐಯ್ಯರ್ ಅವರಿಗೆ ಪಂಚಾಯತ್ ರಾಜ್ ಸಚಿವರಾಗಿ ಮುಂದುವರಿಯಲಿದ್ದಾರೆ. ಕೇಂದ್ರ ಕ್ರೀಡಾ ಮತ್ತು ಯುವಜನ ಖಾತೆಯ ರಾಜ್ಯ ಸಚಿವರಾಗಿ (ಸ್ವತಂತ್ರ ನಿರ್ವಹಣೆ) ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಂ, ಎಸ್ ಗಿಲ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಎಂ. ಎಸ್ ಗಿಲ್ ಸೇರಿದಂತೆ ವಿ ನಾರಾಯಣ ಸ್ವಾಮಿ, ಸಂತೋಷ್ ಬರ್ಗೋದಿಯಾ, ಜ್ಯೋತಿರಾದಿತ್ಯ ಸಿಂಧಿಯಾ, ಜಿತೀನ್ ಪ್ರಸಾದ್, ರಘುನಾಥ್ ಜಾ ಮತ್ತು ರಮೇಶ್ ಓರಾನ್ ಅವರುಗಳಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಭೋದಿಸಿದರು.

ಸಂತೋಷ್ ಬರ್ಗೋದಿಯಾ ಅವರು ಕಲ್ಲಿದ್ದಲು ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಲಿದ್ದು, ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆಯ ರಾಜ್ಯ ಸಚಿವರಾಗಿ ಮನ್ ಮೋಹನ್ ಸಿಂಗ್ ಅವರ ಸರಕಾರದಲ್ಲಿ ಮುಂದುವರಿಲಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಕಾಂಗ್ರೆಸ್ ಪಕ್ಷದ ಆರ್ಥಿಕ ವ್ಯವಹಾರಗಳ ಸಮಿತಿ ಮುಖ್ಯಸ್ಥ ಜೈರಾಮ್ ರಮೇಶ್ ಅವರಿಗೆ ಶಕ್ತಿ ಸಂಪನ್ಮೂಲ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ.

ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಆರು ಜನ ರಾಜ್ಯ ಸಚಿವರುಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದರು. ಪ್ರಧಾನಿ ಮನ್‌ಮೋಹನ್ ಸಿಂಗ್ ಅವರ ಸಲಹೆ ಮೇರೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆಯನ್ನು ಸ್ವೀಕರಿಸಿದರು.

ಸಂಪುಟ ಪುನಾರಚನೆಗೆ ಮುನ್ನ ಸುರೇಶ್ ಪಚೌರಿ (ಸಿಬ್ಬಂದಿ), ದಾಸರಿ ನಾರಾಯಣ್ ರಾವ್ (ಕಲ್ಲಿದ್ದಲು) ಎಂ.ವಿ. ರಾಜಶೇಖರನ್ (ಯೋಜನೆ), ಸುಬ್ಬುರಾಮಿ ರೆಡ್ಡಿ (ಗಣಿ) ಅಖಿಲೇಶ್ ದಾಸ್ (ಸ್ಟೀಲ್) ಮಾಣಿಕ್ ರಾವ್ ಗಾವಿಟ್ (ಗೃಹ) ಅವರುಗಳು ರಾಜೀನಾಮೆ ಸಲ್ಲಿಸಿದ ಪಟ್ಟಿಯಲ್ಲಿ ಇದ್ದಾರೆ.
ಮತ್ತಷ್ಟು
ಕರುಣಾನಿಧಿಯಿಂದ ರಾಜ್ಯಕ್ಕೆ ದ್ರೋಹ-ಜಯಾ
ಠಾಕ್ರೆ ಹೇಳಿಕೆಗೆ ಅಮಿತಾಬ್ ತಿರುಗೇಟು
ಪ್ರಧಾನಿಯಿಂದ ಸಂಪುಟ ವಿಸ್ತರಣೆ ?
ಮಿಸ್ ಇಂಡಿಯ ಯೂನಿವರ್ಸ್ ಪಟ್ಟಕ್ಕೆ ಸಿಮ್ರಾನ್ ಕೌರ್‌
ಅದು ಆಟಿಕೆ ಪಿಸ್ತೂಲಂತೆ!
ಬಿಗ್‌ಬಿ ವಿರುದ್ದ ಠಾಕ್ರೆ ತರಾಟೆ,ರಜನಿಗೆ ಪ್ರಶಂಸೆ