ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಗ್ ಬಿ ರಾಷ್ಟ್ರೀಯ ತಾರೆ: ಬಾಳಾ ಠಾಕ್ರೆ
PTI
ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ ತಮಿಳ್ನಾಡನ್ನು ಸೂಪರ್ ಸ್ಟಾರ್ ರಜನಿಕಾಂತ್ ಸಮರ್ಥಿಸಿಕೊಂಡಿರುವುದನ್ನು ಶ್ಲಾಘಿಸುತ್ತಾ, ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಅಮಿತಾಬ್ ಬಚ್ಚನ್ ಅವರನ್ನು ಟೀಕಿಸಿರುವ ಎರಡು ದಿನಗಳ ಬಳಿಕ, ಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಬಿಗ್ ಬಿ "ಇಡೀ ರಾಷ್ಟ್ರದ ಸೂಪರ್ ಸ್ಟಾರ್" ಎಂದು ಹೊಗಳಿದ್ದಾರೆ.

"ಅಮಿತಾಬ್ ನಿರ್ದಿಷ್ಟ ರಾಜ್ಯವೊಂದರ ತಾರೆ ಮಾತ್ರವಲ್ಲ. ಅವರು ಇಡಿಯ ರಾಷ್ಟ್ರದ ಸೂಪರ್ ಸ್ಚಾರ್, ಹಾಗಾಗಿ ಅವರನ್ನು ಪ್ರಾದೇಶಿಕತ್ವದ ವಿವಾದಗಳಲ್ಲಿ ಎಳೆಯುವುದು ಸೂಕ್ತವಲ್ಲ" ಎಂದು ಠಾಕ್ರೆ ಸೋಮವಾರದ ಸಂಪಾದಕೀಯದಲ್ಲಿ ಹೇಳಿದ್ದಾರೆ.

ಸಾಮ್ನಾದಲ್ಲಿ ಅಮಿತಾಬ್‌ರನ್ನು ತೆಗಳಿದ ದಿನದಂದೆ, ಈ ಹೇಳಿಕೆಯಿಂದ ದೂರವುಳಿಯ ಬಯಸಿದ್ದ ಠಾಕ್ರೆ, ಇದು ತನ್ನ ವೈಯಕ್ತಿಕ ಅಭಿಪ್ರಾಯವಲ್ಲ ಎಂದಿದ್ದ ಠಾಕ್ರೆ, ಅಮಿತಾಬ್ ತನ್ನ ಕುಟುಂಬ ಸ್ನೇಹಿತ ಎಂದಿದ್ದರು.

ಸಾಮ್ನಾದ ಸೋಮವಾರದ ಸಂಪಾದಕೀಯದಲ್ಲಿ, ಬಚ್ಚನ್ ಮೇಲೆ ತನಗೆ ಅಪಾರ ಗೌರವವಿರುವುದಾಗಿ ಠಾಕ್ರೆ ಹೇಳಿದ್ದಾರೆ.
ಮತ್ತಷ್ಟು
ಸಚಿವ ಸ್ಥಾನ ನಿರಾಕರಿಸಿದ ರಾಹುಲ್: ಸೋನಿಯಾ
ಸಂಪುಟ ಪುನಾರಚನೆ: ಅಯ್ಯರ್ ಸ್ಥಾನಕ್ಕೆ ಗಿಲ್
ಕರುಣಾನಿಧಿಯಿಂದ ರಾಜ್ಯಕ್ಕೆ ದ್ರೋಹ-ಜಯಾ
ಠಾಕ್ರೆ ಹೇಳಿಕೆಗೆ ಅಮಿತಾಬ್ ತಿರುಗೇಟು
ಪ್ರಧಾನಿಯಿಂದ ಸಂಪುಟ ವಿಸ್ತರಣೆ ?
ಮಿಸ್ ಇಂಡಿಯ ಯೂನಿವರ್ಸ್ ಪಟ್ಟಕ್ಕೆ ಸಿಮ್ರಾನ್ ಕೌರ್‌