ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ವತಿಯಿಂದ ಭಾನುವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವವನ್ನು ಲಕ್ಷಾಂತರ ಭಕ್ತರು ಕಣ್ಣಲ್ಲಿ ತುಂಬಿಕೊಂಡರು.
ಹೊಳೆವ ಆಭರಣಗಳಿಂದ ಅಲಂಕೃತವಾದ ಭಗವಾನ್ ಶ್ರೀನಿವಾಸ ಹಾಗೂ ಶ್ರೀದೇವಿ ಮತ್ತು ಭೂದೇವಿಯರ ದೈವಿಕ ದೃಶ್ಯವು ಭಕ್ತರಲ್ಲಿ ಭಕ್ತಿಯುಕ್ಕಿಸುತ್ತಿತ್ತು.
ತಿರುಮಲಕ್ಕೆ ತೆರಳಿಗೆ ಅಲ್ಲಿ ಕಲ್ಯಾಣೋತ್ಸವವನ್ನು ಮಾಡಿಸಲು ಶಕ್ತಿಯಿಲ್ಲದಂತಹ ಬಡಭಕ್ತರಿಗಾಗಿ ಟಿಟಿಡಿಯು ಕಲ್ಯಾಣೋತ್ಸವವನ್ನು ಸಂಘಟಿಸಿತ್ತು. ಧಾರ್ಮಿಕ ವಿಧಿವಿಧಾನಗಳನ್ನು ಆಗಮಗಳ ಪ್ರಕಾರ ಮೈಕ್ರೋಫೋನಿನಲ್ಲಿ ಮಂತ್ರಗಳನ್ನು ಉಚ್ಚರಿಸುತ್ತಾ ಪುರೋಹಿತರು ನಡೆಸಿದರು.
ಸಾಯಂಕಾಲ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ತಮಿಳು ಗಾಯಕ ಎಸ್. ಸಿವಚಿದಂಬಂರಂ ಶ್ರೀನಿವಾಸ ದೇವರ ತೆಲುಗು ಮತ್ತು ತಮಿಳು ಕೀರ್ತನೆಗಳನ್ನು ಹಾಡಿದರು.
ಕಲ್ಯಾಣೋತ್ಸವದ ಪ್ರತಿ ವಿಧಿ ವಿಧಾನಗಳು ಕುರಿತು ತಮಿಳಿನಲ್ಲಿ ಅರ್ಥ ವಿವರಣೆ ಮಾಡಲಾಗುತ್ತಿತ್ತು, ಧಾರ್ಮಿಕ ವಿಧಿಗಳ ಮಹತ್ವವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸಲಾಯಿತು. ಕಾರ್ಯಕ್ರಮದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿತ್ತು.
|