ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಲಮನ್ನಾ ವಿರೋಧ ಅರ್ಜಿ ವಿಚಾರಣೆಗೆ ಸು.ಕೋ ನಕಾರ
PTI
ಕೇಂದ್ರ ಸರಕಾರವು 2008-09ರ ಬಜೆಟಿನಲ್ಲಿ ರೂ.60,000 ಕೋಟಿ ರೈತರ ಸಾಲವನ್ನು ಮನ್ನಾ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲದೆ, ಇತರ ಬ್ಯಾಂಕುಗಳಿಂದ ರೈತರು ಪಡೆದ ಸಾಲವನ್ನೂ ಮನ್ನಾಮಾಡಲಾಗುವುದೆಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿರುವುದಾಗಿ ಅರ್ಜಿದಾರರು ತಿಳಿಸಿದ ಬಳಿಕ ಇದರ ವಿಚಾರಣೆಗೆ ಮುಖ್ಯನ್ಯಾಯಾಧೀಶ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠವು ನಿರಾಕರಿಸಿತು.

ಸರಕಾರವು ಯಾವ ಆಧಾರದಲ್ಲಿ 60,000 ಕೋಟಿ ರೂಪಾಯಿ ಮನ್ನಾ ಮಾಡಿದೆ ಎಂಬುದನ್ನು ಪ್ರಶ್ನಿಸಿ ವಕೀಲರಾದ ಎಂ.ಎಲ್. ಶರ್ಮಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಬ್ಯಾಂಕುಗಳ ಪಟ್ಟಿ ಮತ್ತು ರೈತರಿಂದ ಬಾಕಿ ಇರುವ ಸಾಲದ ಮೊತ್ತದ ಪಟ್ಟಿಯನ್ನು ನೀಡುವಂತೆ ಹಣಕಾಸು ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡುವಂತೆ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು.

ಸಾಲಮನ್ನಾ ಯೋಜನೆಯನ್ನು ವಿಸ್ತರಿಸಿ, ಖಾಸಗಿ ಬ್ಯಾಂಕುಗಳು ಮತ್ತು ಲೇವಾದೇವಿ ವ್ಯವಹಾರಗಾರರಿಂದ ರೈತರು ಪಡೆದ ಸಾಲವನ್ನೂ ಮನ್ನಾ ಮಾಡಬೇಕು ಎಂದು ಅರ್ಜಿದಾರರು ವಾದಿಸಿದ್ದರು.

ಖಾಸಗಿ ಲೇವಾದೇವಿಗಾರರನ್ನೂ ಸಾಲಮನ್ನಾ ಯೋಜನೆಯಡಿ ತರಬೇಕು ಎಂದು ಅರ್ಜಿದಾರರು ವಿನಂತಿಸಿದಾಗ, ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರನ್ನೂ ಒಳಗೊಂಡಿದ್ದ ನ್ಯಾಯಪೀಠವು ಅಂತಹ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿತು.
ಮತ್ತಷ್ಟು
ಲಕ್ಷಾಂತರ ಮಂದಿಯ ಕಣ್ಮನ ತುಂಬಿದ ಕಲ್ಯಾಣೋತ್ಸವ  
ಬಿಗ್ ಬಿ ರಾಷ್ಟ್ರೀಯ ತಾರೆ: ಬಾಳಾ ಠಾಕ್ರೆ
ಸಚಿವ ಸ್ಥಾನ ನಿರಾಕರಿಸಿದ ರಾಹುಲ್: ಸೋನಿಯಾ
ಸಂಪುಟ ಪುನಾರಚನೆ: ಅಯ್ಯರ್ ಸ್ಥಾನಕ್ಕೆ ಗಿಲ್
ಕರುಣಾನಿಧಿಯಿಂದ ರಾಜ್ಯಕ್ಕೆ ದ್ರೋಹ-ಜಯಾ
ಠಾಕ್ರೆ ಹೇಳಿಕೆಗೆ ಅಮಿತಾಬ್ ತಿರುಗೇಟು