ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧ್ವಜಹಾರಿಸಿ, ರೈಲು ಸ್ಫೋಟಿಸಲು ಯತ್ನಿಸಿದ ಉಲ್ಫಾ
ತನ್ನ 30ನೇ ಸ್ಥಾಪನಾ ದಿನದ ಅಂಗವಾಗಿ ಅಸ್ಸಾಂನ ಸಾರ್ವಜನಿಕ ಸ್ಥಳಗಳಲ್ಲಿ ತನ್ನ ಧ್ವಜವನ್ನು ಮೊದಲಬಾರಿಗೆ ಹಾರಿಸಿರುವ ನಿಷೇಧಿತ ಸಂಘಟನೆ ಉಲ್ಫಾದ ಸದಸ್ಯರು ಕೋಲ್ಕತಗೆ ತೆರಳುವ ಕಾಮರೂಪ ಎಕ್ಸ್‌ಪ್ರೆಸ್ ರೈಲನ್ನು ಸ್ಫೋಟಿಸಲು ಪ್ರಯತ್ನಿಸಿದ್ದಾರೆ.

ಆರಂಭದಲ್ಲಿ ಉಲ್ಫಾ ಸ್ಥಾಪನಾ ದಿನ ಹಿಂದಿನ ವರ್ಷಗಳಂತೆ ಹಿಂಸಾಚಾರ ಮುಕ್ತವಾಗಿದ್ದರೂ, ಕೋಲ್ಕತಾಗೆ ತೆರಳುವ ಕಾಮ್‌ರೂಪ ಎಕ್ಸ್‌ಪ್ರೆಸ್ ರೈಲನ್ನು ಸುಧಾರಿತ ಸ್ಫೋಟಕದ ಮೂಲಕ ಸ್ಫೋಟಿಸಲು ಯತ್ನಿಸಿದೆ. ದಿಬ್ರುಘಡದ ನಾಪರೂಪರೈಲ್ವೆ ನಿಲ್ದಾಣದಲ್ಲಿ ಬೈಸಿಕಲ್ಲೊಂದರಲ್ಲಿ ಇರಿಸಲಾಗಿದ್ದ ಸ್ಫೋಟಕವನ್ನು 44ನೇ ಫೀಲ್ಡ್ ತುಕಡಿ ಗುರುತಿಸಿದ ಬಳಿಕ ಅದನ್ನು ತಕ್ಷಣ ನಿಷ್ಕ್ರಿಯಗೊಳಿಸಲಾಯಿತು.

ಸಂಘಟನೆಯ ಕೆಂಬಣ್ಣದ ಉದಯಿಸುವ ಸೂರ್ಯನ ಚಿತ್ರದ ಬಿಳಿ ಮತ್ತು ಹಸಿರು ಬಣ್ಣದ ಧ್ವಜಗಳನ್ನು ಶಾಲಾ, ಕಾಲೇಜುಗಳ ಮೈದಾನಗಳು, ಪಂಚಾಯತ್ ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಚೇರಿಗಳು ತೆರೆಯುವ ಮುನ್ನವೇ ಹಾರಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಗುವಾಹಟಿ ವಿಶ್ವವಿದ್ಯಾನಿಲಯದ ಆವರಣ ಸೇರಿದಂತೆ ವಿವಿಧೆಡೆ ಹಾರಿಸಲಾಗಿರುವ ಧ್ವಜಗಳನ್ನು ವಶಪಡಿಸಿಕೊಂಡಿದ್ದು ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು
ಸಾಲಮನ್ನಾ ವಿರೋಧ ಅರ್ಜಿ ವಿಚಾರಣೆಗೆ ಸು.ಕೋ ನಕಾರ
ಲಕ್ಷಾಂತರ ಮಂದಿಯ ಕಣ್ಮನ ತುಂಬಿದ ಕಲ್ಯಾಣೋತ್ಸವ  
ಬಿಗ್ ಬಿ ರಾಷ್ಟ್ರೀಯ ತಾರೆ: ಬಾಳಾ ಠಾಕ್ರೆ
ಸಚಿವ ಸ್ಥಾನ ನಿರಾಕರಿಸಿದ ರಾಹುಲ್: ಸೋನಿಯಾ
ಸಂಪುಟ ಪುನಾರಚನೆ: ಅಯ್ಯರ್ ಸ್ಥಾನಕ್ಕೆ ಗಿಲ್
ಕರುಣಾನಿಧಿಯಿಂದ ರಾಜ್ಯಕ್ಕೆ ದ್ರೋಹ-ಜಯಾ