ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಆಪರಾಧಿಗಳಾದ ಮುಸ್ತಾಕ್ ಮೂಸಾ, ಅಸ್ಗರ್ ಯೂಸುಫ್ ಹಾಗೂ ಇನ್ನಿಬ್ಬರಿಗೆ ವಿಧಿಸಿದ್ದ ಮರಣದಂಡನೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
1993ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮುಸ್ತಾಕ್ ಮೂಸಾ, ಅಸ್ಗರ್ ಯೂಸುಫ್ ಹಾಗೂ ಇನ್ನಿಬ್ಬರಿಗೆ ವಿಧಿಸಿದ್ದ ಮರಣದಂಡನೆಗೆ ತಡೆಯಾಜ್ಞೆ ನೀಡಿದ್ದ ಸರ್ವೊಚ್ಛನ್ಯಾಯಾಲಯ, ಮೇಲ್ಮನವಿಯ ಅಂತಿಮ ತೀರ್ಪು ನೀಡುವವರೆಗೆ ಈ ತಡೆಯಾಜ್ಞೆ ನೀಡಿರುವುದಾಗಿ ಹೇಳಿದೆ.
ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಮತ್ತೊಬ್ಬ ಆರೋಪಿ ಝಾಕಿರ್ ಹುಸೈನ್ ನೂರ್ ಮೊಹಮ್ಮದ್ ಶೇಕ್‌ಗೆ ನೀಡಿದ್ದ ತಡೆಯಾಜ್ಞೆಯ ಮೂರು ದಿನಗಳ ಬಳಿಕ ಈ ಆದೇಶ ನೀಡಿದೆ.
|