ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖ್ಯಸ್ಥ ರಾಜ್ ಠಾಕ್ರೆಯ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಯಾರು ಏನೇ ಹೇಳಲಿ; ಮುಂಬೈ ಬಿಟ್ಟು ತೆರಳಲಾರೆ ಎಂದು ಹೇಳಿದ್ದಾರೆ.
ಸೇನಾ, ಸಾಮ್ನಾ ಹೇಳಿಕೆಗಳಿಂದ ಭಾವನಾತ್ಮಕವಾಗಿ ನೊಂದಿರುವ ಅಮಿತಾಬ್ ಬಚ್ಜನ್, ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, "ಅವರು ಬಾಟಲಿಗಳನ್ನು ಎಸೆಯಲಿ, ಅವರು ಮೋರ್ಚಾಗಳನ್ನು ನಡೆಸಲಿ, ಅವರು ನನ್ನನ್ನು ದೂಷಿಸಲಿ ನಾನಂತೂ ಕದಲಲಾರೆ" ಎಂದು ದೃಢವಾಗಿ ಹೇಳಿದ್ದಾರೆ.
ಕರ್ಮಭೂಮಿ' ವಿವಾದಕ್ಕೆ ಸಂಬಂಧಿಸಿದಂತೆ ಪ್ರಥಮ ಬಾರಿಗೆ ಮೌನಮುರಿದಿರುವ ಅಮಿತಾಬ್, ತನ್ನ ಭಿತ್ತಿಚಿತ್ರಗಳಿಗೆ ಮಸಿಬಳಿದರೆ, ತನ್ನ ಸಿನಿಮಾಗಳ ಪ್ರದರ್ಶನಕ್ಕೆ ಅಡ್ಡಿಯುಂಟುಮಾಡಿದರೂ ತಾನು ಬೆದರಲಾರೆ ಎಂಬುದಾಗಿ ಎಂಎನ್ಎಸ್ ಮುಖ್ಯಸ್ಥ ಹಾಗೂ ಅವರ ಬೆಂಬಲಿಗರಿಗೆ ಸವಾಲು ಹಾಕಿದ್ದಾರೆ.
ತನ್ನ ಪ್ರತಿಷ್ಠೆ ಹಾಗೂ ಸಮಗ್ರತೆಯ ಮೇಲಿನ ದಾಳಿ, ಮತ್ತು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ತನ್ನ ಪ್ರತಿಷ್ಠೆಗೆ ಧಕ್ಕೆಯುಂಟುಮಾಡುವ ಯಾವುದೇ ಪ್ರಯತ್ನಗಳು, ಎಲ್ಲಾ ಅಪಸವ್ಯಗಳ ವಿರುದ್ಧದ ಹೋರಾಟಕ್ಕೆ ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
|