ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಗತ್ಯವಸ್ತುಗಳ ಬೆಲೆ ಕೈಗೆಟುಕುವಂತಿರಲಿ: ಸೋನಿಯಾ
PTI
ಮುಂಬರುವ ಚುನಾವಣೆಗಳಲ್ಲಿ ಬೆಲೆಏರಿಕೆಯು ಪ್ರಧಾನ ವಿಷಯವಾಗುವ ಬೆದರಿಕೆಯೊಡ್ಡುತ್ತಿರುವಂತೆ, ಅಗತ್ಯವಸ್ತುಗಳ ಬೆಲೆಯು ಜನಸಾಮಾನ್ಯನ ಕೈಗೆಟಕುವಂತಿರುತ್ತದೆ ಎಂಬುದನ್ನು ಸರಕಾರ ಖಚಿತ ಪಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಪಕ್ಷದ ಮುಖವಾಣಿಯ ಈಚಿನ ಆವೃತ್ತಿ 'ಲೆಟರ್ ಟು ಕಾಂಗ್ರೆಸ್'ನಲ್ಲಿ ಅವರು, ಬೆಲೆನಿಯಂತ್ರಣದ ಹೊರೆಯನ್ನು ರಾಜ್ಯಸರಕಾರಗಳ ಮೇಲೆ ಹೇರಿದ್ದು, ರಾಜ್ಯ ಸರಕಾರಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಗೊಳಿಸಬೇಕು ಮತ್ತು ಕಾಳ ಸಂತೆ ಹಾಗೂ ಖೊಟ್ಟಿ ಕೊರತೆಗಳನ್ನು ನಿಯಂತ್ರಿಸಬೇಕು ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಬೆಳವಣಿಗೆಗಳಿಂದಾಗಿ ಇತ್ತೀಚಿನ ವಾರಗಳಲ್ಲಿ ರಾಷ್ಟ್ರದಲ್ಲಿ ಹಣದುಬ್ಬರ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಸಂದೇಶ್‌ನಲ್ಲಿ ಸೋನಿಯಾ ಹೇಳಿದ್ದಾರೆ.

ಈ ವಿಚಾರದಲ್ಲಿ ನಮ್ಮ ಪ್ರಧಾನಿಯವರು ಅತಿಸೂಕ್ಷ್ಮವಾಗಿದ್ದಾರೆ ಮತ್ತು ಹೆಚ್ಚಿನ ಅಭಿವೃದ್ಧಿಯು ಅತ್ಯಗತ್ಯ ಎಂಬ ನಮ್ಮ ಪಕ್ಷದ ಚಿಂತನೆಯನ್ನು ಅವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಇದೇ ವೇಳೆ ಅಗತ್ಯವಸ್ತುಗಳ ಬೆಲೆಯು ಸಮಾಜದ ಎಲ್ಲಾ ವರ್ಗಗಳ ಕೈಗೆಟಕುವಂತಿರಬೇಕು" ಸೋನಿಯಾ ಅಭಿಪ್ರಾಯಿಸಿದ್ದಾರೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸುದೃಢಗೊಳಿಸುವುದು ರಾಜ್ಯಗಳ ಜವಾಬ್ದಾರಿ ಎಂದು ನುಡಿದಿರುವ ಅವರು ಇದನ್ನು ಆದ್ಯತೆಯ ಮೇರೆಗೆ ರಾಜ್ಯಗಳು ಪರಿಗಣಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಕೇಂದ್ರ ಸರಕಾರಗಳಿಗೆ ಊಹಾಪೋಹಗಳನ್ನು ನಿಯಂತ್ರಿಸುವ ಅಧಿಕಾರ ಇರುವಂತೆಯೇ ರಾಜ್ಯ ಸರಕಾರಗಳಿಗೆ ಕಾಳ ಸಂತೆ ಹಾಗೂ ಅಕ್ರಮ ದಾಸ್ತಾನುಗಳನ್ನು ನಿಯಂತ್ರಿಸುವ ಅಧಿಕಾರ ಇದೆ ಎಂದು ನುಡಿದ ಸೋನಿಯಾ ಈ ಅಧಿಕಾರಗಳನ್ನು ಬಳಸಿಕೊಂಡಲ್ಲಿ ಬೆಲೆ ಏರಿಕೆಯು 'ಆಮ್ ಆದ್ಮಿ'ಯನ್ನು ಬಾಧಿಸದು ಎಂದು ಹೇಳಿದ್ದಾರೆ.
ಮತ್ತಷ್ಟು
ಯಾರು ಏನೇ ಅನ್ನಲಿ, ಮುಂಬೈ ಬಿಡೆ: ಬಚ್ಚನ್
ಟಾಡಾ ವಿಧಿಸಿದ್ದ ಮರಣದಂಡನೆಗೆ ತಡೆ
ಧ್ವಜಹಾರಿಸಿ, ರೈಲು ಸ್ಫೋಟಿಸಲು ಯತ್ನಿಸಿದ ಉಲ್ಫಾ
ಸಾಲಮನ್ನಾ ವಿರೋಧ ಅರ್ಜಿ ವಿಚಾರಣೆಗೆ ಸು.ಕೋ ನಕಾರ
ಲಕ್ಷಾಂತರ ಮಂದಿಯ ಕಣ್ಮನ ತುಂಬಿದ ಕಲ್ಯಾಣೋತ್ಸವ  
ಬಿಗ್ ಬಿ ರಾಷ್ಟ್ರೀಯ ತಾರೆ: ಬಾಳಾ ಠಾಕ್ರೆ