ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯದಲ್ಲೂ ಸಿಖ್ಖರಿಗೆ 'ಅಲ್ಪಸಂಖ್ಯಾತರು' ಮಾನ್ಯತೆ
ಮಹತ್ವದ ಬೆಳವಣಿಗೆಯೊಂದರಲ್ಲಿ, ಸಿಖ್ ಸಮುದಾಯವನ್ನು ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗಿದೆ.

ಇದರೊಂದಿಗೆ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ಪ್ರಧಾನಿಯವರ 15 ಅಂಶಗಳ ಕಾರ್ಯಕ್ರಮದಡಿ ದೊರೆಯುವ ಲಾಭಗಳನ್ನೆಲ್ಲಾ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿರುವ ಸಿಖ್ಖರೂ ಪಡೆಯಲಿದ್ದಾರೆ.

ಸಿಖ್ಖರಿಗೂ ಅಲ್ಪಸಂಖ್ಯಾತರೆಂಬ ಮಾನ್ಯತೆ ನೀಡಬೇಕು ಎಂದು ಎರಡೂ ರಾಜ್ಯಗಳು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಪತ್ರ ಬರೆದಿದ್ದವು ಎಂದು ಆಯೋಗದ ಸದಸ್ಯ ಹರಚರಣ್ ಸಿಂಗ್ ಜೋಷ್ ತಿಳಿಸಿದ್ದಾರೆ.

ಈ ಯೋಜನೆಯಡಿ, ಸಿಖ್ ಸಮುದಾಯದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಎರಡೂವರೆ ದಶಲಕ್ಷ ರೂಪಾಯಿಗಳ ಸ್ಕಾಲರ್‌ಶಿಪ್ ಪಡೆಯಲು ಅರ್ಹರಾಗುತ್ತಾರೆ. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯಿದೆ 1992 ಪ್ರಕಾರ, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಜೊರಾಷ್ಟ್ರಿಯನ್ನರು ಮತ್ತು ಬೌದ್ಧರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗಿದೆ. 2001ರ ಜನಗಣತಿ ಪ್ರಕಾರ, ಈ ಐದು ಸಮುದಾಯದವರು ಭಾರತೀಯ ಜನಸಂಖ್ಯೆಯ ಶೇ.18.42ರಷ್ಟಿದ್ದಾರೆ.

ಇತ್ತೀಚೆಗೆ ಸುಪ್ರೀಂ ಕೋರ್ಟು ತೀರ್ಪೊಂದನ್ನು ನೀಡಿ, ಸಿಖ್ಖರನ್ನು ಪಂಜಾಬಿನಲ್ಲಿ ಅಲ್ಪಸಂಖ್ಯಾತರು ಎಂದು ಪರಿಗಣಿಸುವಂತಿಲ್ಲ ಎಂದು ಹೇಳಿತ್ತು.
ಮತ್ತಷ್ಟು
ಹೊಗೆ: ಕರುಣಾ ರಾಜೀನಾಮೆಗೆ ಜಯಾ ಆಗ್ರಹ
ಸಾಲದು ವೇತನ : ಸೇನೆಯಿಂದ ಅಧಿಕಾರಿಗಳ ನಿರ್ಗಮನ
ಅಗತ್ಯವಸ್ತುಗಳ ಬೆಲೆ ಕೈಗೆಟುಕುವಂತಿರಲಿ: ಸೋನಿಯಾ
ಯಾರು ಏನೇ ಅನ್ನಲಿ, ಮುಂಬೈ ಬಿಡೆ: ಬಚ್ಚನ್
ಟಾಡಾ ವಿಧಿಸಿದ್ದ ಮರಣದಂಡನೆಗೆ ತಡೆ
ಧ್ವಜಹಾರಿಸಿ, ರೈಲು ಸ್ಫೋಟಿಸಲು ಯತ್ನಿಸಿದ ಉಲ್ಫಾ