ನಿಷೇಧಿತ ಸಿಪಿಐ(ಮಾವೋವಾದಿ) ಬಂಡುಕೋರರು ತಮ್ಮ ವಿರೋಧಿ ನಕ್ಸಲೈಟ್ ಸಂಘಟನೆಯ ಆರು ಮಂದಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ರೊತಾಸ್ ಜಿಲ್ಲೆಯಲ್ಲಿ ಸಂಭವಿಸಿದೆ.
ಜಾರ್ಖಂಡ್‌ನಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಸಶಸ್ತ್ರ ಜನತಾ ಮೋರ್ಚಾದ(ಎಸ್‌ಪಿಎಂ)ದ ಆರು ಕಾರ್ಯಕರ್ತರನ್ನು ರೋತಾಸ್ ಜಿಲ್ಲೆಯ ಟಾರ್ಡಿ ಅರಣ್ಯದಲ್ಲಿ ಗುಂಡಿಕ್ಕಿ ಕೊಂದಿರುವುದಾಗಿ ಎಐಜಿ(ಕಾರ್ಯಾಚರಣೆ) ಎಸ್.ಕೆ.ಭಾರಾದ್ವಾಜ್ ಪಿಟಿಐಗೆ ತಿಳಿಸಿದ್ದಾರೆ.
ಸತ್ತವರು ಜಾರ್ಖಂಡ್ ಗಡಿಭಾಗದ ಬರಚಟ್ಟಿ ಹಾಗೂ ಮೋಹನ್‌ಪುರ ಪ್ರದೇಶದವರೆಂದು ಅವರು ಹೇಳಿದ್ದಾರೆ. ಗುಂಡಿಗೆ ಬಲಿಯಾದರು ಪೊಲೀಸರಿಗೆ ಮಾಹಿತಿ ನೀಡುವವರಾಗಿದ್ದರು ಎಂಬ ವದಂತಿಯನ್ನು ಭಾರಾದ್ವಾಜ್ ತಳ್ಳಿಹಾಕಿದ್ದಾರೆ.
|