ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಕ್ಕಿಜ್ವರ: ತ್ರಿಪುರಾದಲ್ಲಿ ಕಟ್ಟೆಚ್ಚರ
PTI
ರಾಜ್ಯದಲ್ಲಿ ಹಕ್ಕಿಜ್ವರ ಮತ್ತೆರಡು ಜಿಲ್ಲೆಗಳಿಗೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ತ್ರಿಪುರಾ ಸರಕಾರವು ರಾಜ್ಯದ್ಯಂತ ಕಟ್ಟೆಚ್ಚರ ವಹಿಸಿದೆ. ಹಕ್ಕಿಜ್ವರ ಮೊದಲಿಗೆ ಕಾಣಿಸಿಕೊಂಡಿರುವ ದಲೈ ಜಿಲ್ಲೆಯಲ್ಲಿ ವಧಾ ಕಾರ್ಯ ಆರಂಭಗೊಂಡಿದ್ದು, ಗುರುವಾರ ಮೂರನೆ ದಿನಕ್ಕೆ ಕಾಲಿರಿಸಿದೆ.

ನೆರೆಯ ಬಾಂಗ್ಲಾದೇಶ ಸೇರಿದಂತೆ ಹೊರಗಡೆಯಿಂದ ಕೋಳಿ ಆಮದನ್ನು ತಡೆಯಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ದಕ್ಷಿಣ ತ್ರಿಪುರ ಉಪವಿಭಾಗದ ಬೆಲೊನಿಯಾದ ನೆಹರ್ನಗರ್‌ನಲ್ಲಿ ಕಳೆದ ಒಂದು ವಾರದಿಂದ ಸುಮಾರು 200 ಕೋಳಿ ಹಾಗೂ ಇತರ ಪಕ್ಷಿಗಳು ಸತ್ತು ಬಿದ್ದಿವೆ. ಪಶ್ಚಿಮ ತ್ರಿಪುರಾದ ಸದರ್ ಉಪವಿಭಾಗದ ಕಟ್ಲಮರ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಕೆಲವು ಕಾಗೆಗಳು ಸಾಯುತ್ತಿರುವ ಕುರಿತು ವರದಿಯಾಗಿದೆ.

ಸತ್ತಿರುವ ಪಕ್ಷಿಗಳ ರಕ್ತದ ಸ್ಯಾಂಪಲ್ ಸಂಗ್ರಹಿಸಾಗಿದ್ದು ಇವುಗಳನ್ನು ಭೋಪಾಲದ ಪ್ರಾಣಿ ರೋಗ ಪತ್ತೆ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ರಾಜ್ಯದಲ್ಲಿನ ಪಶುವೈದ್ಯರು ನಡೆಸಿರುವ ಪ್ರಾಥಮಿಕ ಪರೀಕ್ಷೆಗಳಿಂದ ಪಕ್ಷಿಗಳಿಗೆ ಹಕ್ಕಿಜ್ವರ ತಗುಲಿದೆಯೆ ಎಂಬ ಅಂಶ ಗೊತ್ತಾಗಲಿಲ್ಲ.
ಮತ್ತಷ್ಟು
ನಕ್ಸಲರಿಂದ ಆರು ಮಂದಿಯ ಹತ್ಯೆ
ಶೇ.27 ಒಬಿಸಿ ಕೋಟಾ: ಸುಪ್ರೀಂ ಕೋರ್ಟು ಅಸ್ತು
ಮೇಜರ್ ಜನರಲ್ ವಿನಯಕುಮಾರ್ ವಿರುದ್ಧ ಆರೋಪ ದಾಖಲು
ನಾನು ಹೀರೋ ಅಲ್ಲ: ರಾಹುಲ್ ಗಾಂಧಿ
ಹೊಗೆ ನಂದಿಸಲು ಸೋನಿಯಾ ಕಾರಣ ಅಲ್ಲ: ಮೊಯಿಲಿ
ಭ್ರಷ್ಟನ ಪತ್ನಿಯೂ ತಪ್ಪಿತಸ್ಥಳೇ: ಕೋರ್ಟ್