ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾತಿಯೊಂದೇ ಮಾನದಂಡವಲ್ಲ: ಸು.ಕೋ
ವ್ಯಕ್ತಿಯೊಬ್ಬನ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯ ನಿರ್ಧಾರಕ್ಕೆ ಜಾತಿಯು ನಿರ್ಣಾಯಕ ಅಂಶಗಳಲ್ಲಿ ಒಂದಾಗಿದ್ದರೂ ಅದು ಏಕೈಕ ಅಂಶವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹಿಂದುಳಿದ ವರ್ಗದ ನಿರ್ಣಯವು ಜಾತಿಯೊಂದರ ಆಧಾರದಲ್ಲೇ ಇರಲು ಸಾಧ್ಯವಿಲ್ಲ. ಬಡತನ, ಸಾಮಾಜಿಕ ಹಿಂದುಳಿದಿರುವಿಕೆ, ಆರ್ಥಿಕ ಹಿಂದುಳಿದಿರುವಿಕೆಗಳು ಸಹ ಹಿಂದುಳಿದ ವರ್ಗದ ನಿರ್ಣಯದ ಮಾನದಂಡವಾಗಿದೆ ಎಂದು ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಗುರುವಾರ ಹೇಳಿದ್ದಾರೆ.

ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದವರ ಪಟ್ಟಿಯು ಜಾತಿಯ ಏಕೈಕ ಆಧಾರದಲ್ಲಿಲ್ಲದ ಕಾರಣ ಈ ಗುರುತಿಸುವಿಕೆಯು ಸಂವಿಧಾನದ ಕಲಂ15(1)ರ ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಮೀಸಲಾತಿಗೆ ಜಾತಿಯು ಆಧಾರವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದ ಮೀಸಲಾತಿ ವಿರೋಧಿ ಅರ್ಜಿದಾರರು, ಪ್ರಸ್ತುತ ಸನ್ನಿವೇಶದಲ್ಲಿ ಜಾತಿಪದ್ಧತಿಯು ಬದಲಾಗಿದ್ದು, ಹೆಚ್ಚಿನ ಮಂದಿ ತಮ್ಮ ಸಾಂಪ್ರಾದಾಯಿಕ ವೃತ್ತಿತ್ಯಜಿಸಿ ವೈದ್ಯರು, ಎಂಜೀನಿಯರ್ ಹಾಗೂ ವಕೀಲ ವೃತ್ತಿಗಳನ್ನು ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಮತ್ತಷ್ಟು
ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ: ಅರ್ಜುನ್
ಹಕ್ಕಿಜ್ವರ: ತ್ರಿಪುರಾದಲ್ಲಿ ಕಟ್ಟೆಚ್ಚರ
ನಕ್ಸಲರಿಂದ ಆರು ಮಂದಿಯ ಹತ್ಯೆ
ಶೇ.27 ಒಬಿಸಿ ಕೋಟಾ: ಸುಪ್ರೀಂ ಕೋರ್ಟು ಅಸ್ತು
ಮೇಜರ್ ಜನರಲ್ ವಿನಯಕುಮಾರ್ ವಿರುದ್ಧ ಆರೋಪ ದಾಖಲು
ನಾನು ಹೀರೋ ಅಲ್ಲ: ರಾಹುಲ್ ಗಾಂಧಿ