ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓಡುವ ಆನೆಗಳಿಗೆ 'ಬ್ರೇಕ್' ಮೂಲಕ ಅಂಕುಶ!
ಆನೆ ನಡೆದದ್ದೇ ದಾರಿ ಅಂತನ್ನೋದು, ಆನೆ ಓಡಿದ್ದೇ ದಾರಿ ಎಂಬಲ್ಲಿಗೆ ತಿರುಗಿದರೆ? ಖಂಡಿತವಾಗಿಯೂ ಅದಕ್ಕೆ ಅಂಕುಶ ಹಾಕಲೇಬೇಕು. ಇಲ್ಲವಾದಲ್ಲಿ ಎದುರಿಗಿದ್ದ ಜನ ನಜ್ಜುಗುಜ್ಜು. ಈ ರೀತಿ ಮದವೇರಿದ ಆನೆಗಳಿಗೆ ಕೇವಲ ಅಂಕುಶ ತೊಡಿಸಿದರೆ ಸಾಲದು, ಅದಕ್ಕೊಂದು 'ಬ್ರೇಕ್' ಕೂಡ ಹಾಕಬೇಕು ಎಂಬ ಯೋಚನೆಯೊಂದಿಗೆ ಇಲ್ಲಿನ ಕಿರಿ ಸಂಶೋಧಕರೊಬ್ಬರು ಕಾರ್ಯಗತರಾಗಿದ್ದಾರೆ.

ಇದರ ಪರಿಣಾಮವಾಗಿ ಸಿದ್ಧವಾದದ್ದೇ ಲೋಹದ 'ಬ್ರೇಕ್'. ಮದವೇರಿದ ಆನೆ ಅತ್ತಿತ್ತ ಓಡಾಡುತ್ತಿರುವಾಗ ಅದರ ಮೇಲೆ ಕುಳಿತ ಮಾವುತ ಈ ಬ್ರೇಕ್ ಒತ್ತಿದರಾಯಿತು. ಆನೆ ಅಲ್ಲಿಗೇ ಸ್ಟಾಪ್!

ಅತ್ಯಂತ ಬಲಶಾಲಿ ಮದ್ದಾನೆಯನ್ನೂ ಇದು ನಿಯಂತ್ರಿಸಬಹುದು ಎನ್ನುತ್ತಾರೆ ಈ 'ಜಂಬೋ ಬ್ರೇಕ್' ಕಂಡುಹಿಡಿದ ಭಾಸ್ಕರನ್. ಆದರೆ ಗಜ ತಜ್ಞರು ಇದರ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಾರೆ.

ಈ ಸಾಧನದಲ್ಲಿ ಒಂದು ಕಬ್ಬಿಣದ ಬೀಗ ಇರುತ್ತದೆ. ಅದನ್ನು ಪ್ರಾಣಿಯ ಮುಂಗಾಲುಗಳಿಗೆ ಕೇಬಲ್ ಮೂಲಕ ಅಳವಡಿಸಲಾಗುತ್ತದೆ. ಈ ಹಗ್ಗ ರೂಪದ ಕೇಬಲನ್ನು ಮಾವುತ ಅವಶ್ಯಕತೆಯಿದ್ದಾಗ ಎಳೆದರಾಯಿತು. ಸಾಮಾನ್ಯ ಪರಿಸ್ಥಿತಿಗಳಲ್ಲಿ ಈ ಸಾಧನವು ಆನೆಗೆ ಯಾವುದೇ ರೀತಿಯಲ್ಲೂ ತೊಡಕಾಗುವುದಿಲ್ಲ ಎನ್ನುತ್ತಾರೆ ಭಾಸ್ಕರನ್.

ಕೇರಳದಲ್ಲಿ, ವಿಶೇಷವಾಗಿ ಬೇಸಿಗೆಯ ಉತ್ಸವಾದಿಗಳ ಅವಧಿಯಲ್ಲಿ ಆನೆಗಳಿಂದ ಹಿಂಸಾಚಾರದ ವರದಿಗಳು ಹೆಚ್ಚು ಹೆಚ್ಚು ಕೇಳಿಬರುತ್ತಿರುವುದರಿಂದ ಈ ಯೋಚನೆ ಹೊಳೆಯಿತು ಎಂದು ವಡಕ್ಕಂಚೇರಿಯ ಪೀಠೋಪಕರಣ ಮಳಿಗೆಯ ಮೇಲ್ವಿಚಾರಕರಾಗಿರುವ ಭಾಸ್ಕರನ್ ಹೇಳುತ್ತಾರೆ.

ಅವರು ಈ ಸಂಶೋಧನೆಯ ಬಗ್ಗೆ ಈಗಾಗಲೇ ರಾಷ್ಟ್ರೀಯ ಹೊಸಕಲ್ಪನೆಗಳ ಪ್ರತಿಷ್ಠಾನಕ್ಕೆ ಪತ್ರ ಬರೆದಿದ್ದು, ಈ ಉಪಕರಣಕ್ಕೆ ಮೊದಲು ಅಧಿಕೃತವಾಗಿ ರಾಜ್ಯದ ಪಶುವೈದ್ಯಕೀಯ ತಜ್ಞರಿಂದ ಅನುಮೋದನೆ ಪಡೆದುಕೊಳ್ಳುವಂತೆ ಅವರಿಗೆ ಸಲಹೆ ನೀಡಲಾಗಿದೆ.
ಮತ್ತಷ್ಟು
ಮೇಲ್ಜಾತಿಯ ಹಿಂದುಳಿದವರಿಗೂ ಕೋಟಾ: ಮಾಯಾ ಆಗ್ರಹ
ಜಾತಿಯೊಂದೇ ಮಾನದಂಡವಲ್ಲ: ಸು.ಕೋ
ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ: ಅರ್ಜುನ್
ಹಕ್ಕಿಜ್ವರ: ತ್ರಿಪುರಾದಲ್ಲಿ ಕಟ್ಟೆಚ್ಚರ
ನಕ್ಸಲರಿಂದ ಆರು ಮಂದಿಯ ಹತ್ಯೆ
ಶೇ.27 ಒಬಿಸಿ ಕೋಟಾ: ಸುಪ್ರೀಂ ಕೋರ್ಟು ಅಸ್ತು