ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎ ಸರಕಾರದ ವೈಫಲ್ಯದ ಫಲ ಹಣದುಬ್ಬರ
ಹಣದುಬ್ಬರದ ದರವು ಈ ಪರಿಯಲ್ಲಿ ಏರಿರುವುದು ಯುಪಿಎ ಸರಕಾರದ ಒಟ್ಟಾರೆ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ಶುಕ್ರವಾರ ಹೇಳಿದೆ.

ಯುಪಿಎ ಸರಕಾರದ ಕೊನೆಯ ಹಂತದಲ್ಲಿ ಹಣದುಬ್ಬರವು ಶೇ.7.4ರಷ್ಟು ಏರಿದ್ದು, ಇದು ಯುಪಿಎ ಸರಕಾರದ ನಾಲ್ಕುವರ್ಷದ ಆಡಳಿತೆಯ ಆರ್ಥಿಕ ನೀತಿಗಳ ಒಟ್ಟಾರೆ ವೈಫಲ್ಯವನ್ನು ತೋರುತ್ತದೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.

ಯುಪಿಯ ಸರಕಾರದ ಪಾಶವೀ ಕೃತ್ಯದಿಂದಾಗಿ ಜನಸಾಮಾನ್ಯರ ರಕ್ತಪಾತವಾಗುತ್ತಿದೆ ಎಂದು ಬಿಜೆಪಿ ಅತ್ಯುಗ್ರ ಟೀಕೆ ಮಾಡಿದೆ. ಮಾರ್ಟ್ 29ರ ವಾರಾಂತ್ಯಕ್ಕೆ ಪ್ರಕಟವಾಗಿರುವ ಹಣದುಬ್ಬರದ ದರವು ಶೇ7.41ಕ್ಕೇರಿದ್ದು, ಯುಪಿಎ ಅಧಿಕಾರಾವಧಿಯಲ್ಲಿ ಇದು ಸಾರ್ವಕಾಲಿಕ ಹೆಚ್ಚಳವಾಗಿದೆ.

ಓರ್ವ ಅರ್ಥಶಾಸ್ತ್ರಜ್ಞ ಪ್ರಧಾನ ಮಂತ್ರಿಯನ್ನು ಹೊಂದಿರುವ ಯುಪಿಎ ಸರಕಾರದ ಆರ್ಥಿಕ ಒರಟುತನವು 'ಆಮ್ ಆದ್ಮಿಯ' ರಕ್ತಸುರಿಸುತ್ತಿದೆ ಎಂದು ರೂಡಿ ಆಪಾದಿಸಿದ್ದಾರೆ.

ಸಗಟು ಸೂಚ್ಯಂಕ ಆಧಾರಿತ ಹಣದುಬ್ಬರವು, ಹಣ್ಣು ಹಂಪಲು - ತರಕಾರಿ, ಆಹಾರಧಾನ್ಯಗಳು, ಸಾಂಬಾರ ವಸ್ತುಗಳು ಮತ್ತು ಇತರ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ನಾಗಾಲೋಟದ ಏರಿಕೆ ಕಂಡಿದೆ.
ಮತ್ತಷ್ಟು
ಓಡುವ ಆನೆಗಳಿಗೆ 'ಬ್ರೇಕ್' ಮೂಲಕ ಅಂಕುಶ!
ಮೇಲ್ಜಾತಿಯ ಹಿಂದುಳಿದವರಿಗೂ ಕೋಟಾ: ಮಾಯಾ ಆಗ್ರಹ
ಜಾತಿಯೊಂದೇ ಮಾನದಂಡವಲ್ಲ: ಸು.ಕೋ
ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ: ಅರ್ಜುನ್
ಹಕ್ಕಿಜ್ವರ: ತ್ರಿಪುರಾದಲ್ಲಿ ಕಟ್ಟೆಚ್ಚರ
ನಕ್ಸಲರಿಂದ ಆರು ಮಂದಿಯ ಹತ್ಯೆ