ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೋಯಿಂಗ್ ಪೂರೈಕೆ ವಿಳಂಬದಿಂದಾಗಿ ಆಧುನೀಕರಣಕ್ಕೆ ಅಡ್ಡಿ
ಅಮೇರಿಕಾದಿಂದ ಏರ್ ಇಂಡಿಯಾಗೆ ಪೂರೈಕೆಯಾಗಬೇಕಾಗಿದ್ದ ಬೋಯಿಂಗ್-787 'ಡ್ರೀಮ್‌ಲೈನರ್', ವಿಳಂಬದಿಂದಾಗಿ ನಿರಾಶೆಯಾಗಿದೆ. ಇದು ವಾಯುಯಾನ ಯೋಜನೆಗಳ ಆಧುನೀಕರಣಕ್ಕೆ ಅಡ್ಡಿಯಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

"787ರ ಪೂರೈಕೆಯಲ್ಲಿ ಹಿನ್ನಡೆ ಉಂಟಾಗಿರುವುದು ನಮಗೆ ಅತೀವ ನಿರಾಶೆಯನ್ನು ಉಂಟು ಮಾಡಿದೆ. ಏರ್ ಇಂಡಿಯಾದ ಭವಿಷ್ಯದ ಯೋಜನೆಗಳಿಗೆ ಇದು ಮುಖ್ಯ ವಿಮಾನವಾಗಿತ್ತು. ಇದು ಇನ್ನಷ್ಟು ತಡವಾಗುವುದಿಲ್ಲ ಎನ್ನುವ ಆಶಯವನ್ನು ನಾವು ಹೊಂದಿದ್ದೇವೆ" ಎಂದು ನಾಗರೀಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.

ಬೋಯಿಂಗ್ ಕಂಪನಿಯು ತನ್ನ 787 ಡ್ರೀಮ್‌ಲೈನರ್ ಪೂರೈಕೆಯಲ್ಲಿ ಕನಿಷ್ಟ ಆರು ತಿಂಗಳಾದರೂ ವಿಳಂಬವಾಗುವುದು ಎಂದು ತಿಳಿಸಿದೆ. ಈ ಮುನ್ನ ಏರ್ ಇಂಡಿಯಾ 27 ವಿಮಾನಗಳಲ್ಲಿ ಮೊದಲನೆಯ ವಿಮಾನ ಈ ವರ್ಷದ ಮಧ್ಯ ಭಾಗದಲ್ಲಿ ಪೂರೈಕೆಯಾಗಬಹುದೆಂದು ನಿರೀಕ್ಷಿಸಿತ್ತು. ಆದರೆ ಈಗ ಆಗುತ್ತಿರುವ ವಿಳಂಬದಿಂದ ಮುಂದಿನ ವರ್ಷಕ್ಕೆ ಮುಂಚೆ ಅಥವಾ ಮುಂದಿನ ವರ್ಷದ ಮೊದಲ ಭಾಗದಲ್ಲಿ ಈ ವಿಮಾನ ಬರಬಹುದು.

ಇದರಿಂದ ಉಂಟಾಗುವ ನಷ್ಟವನ್ನು ಪರಿಹಾರ ರೂಪದಲ್ಲಿ ತುಂಬಿಕೊಡಲು ಬೋಯಿಂಗ್ ಅನ್ನು ಕೇಳಲಾಗುವುದೇ ಎಂದು ಕೇಳಲಾದ ಪ್ರಶ್ನೆಗೆ, "ಅಮೇರಿಕಾದ ಈ ಘಟಕದೊಂದಿಗೆ ಆಗಿರುವ ಒಪ್ಪಂದದಂತೆ ರಾಷ್ಟ್ರೀಯ ವಾಹಕ ಪರಿಹಾರಗಳನ್ನು ತುಂಬಿಕೊಡಲಿದೆ. ಈ ವಿಮಾನಗಳು ಸಾಕಷ್ಟು ವಿಸ್ತಾರ ಇರುವುದರಿಂದ ಅಮೇರಿಕಾ ಮತ್ತು ಉತ್ತರ ಅಮೇರಿಕಾಗಳಿಗೆ ತಡೆರಹಿತ ಸೇವೆಯನ್ನು ನೀಡಲು ಅನುಕೂಲವಾಗುತ್ತದೆ. ಅಲ್ಪಾವಧಿಗೆ ಮತ್ತು ಮಧ್ಯಮ ಅವಧಿಗೆ ವಿಮಾನ ಹಾರಾಟಕ್ಕೆ ತೊಂದರೆಯಾಗದಂತೆ ವಿಮಾನಗಳನ್ನು ಗುತ್ತಿಗೆಗೆ ತೆಗೆದುಕೊಳ್ಳಲಾಗುತ್ತದೆ. ನಾವು ಏರ್ ಇಂಡಿಯಾದ ಗುತ್ತಿಗೆ ಯೋಜನೆಯನ್ನು ಬೆಂಬಲಿಸುತ್ತೇವೆ" ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಎಂದು ತಿಳಿಸಿದರು.
ಮತ್ತಷ್ಟು
ಯುಪಿಎ ಸರಕಾರದ ವೈಫಲ್ಯದ ಫಲ ಹಣದುಬ್ಬರ
ಓಡುವ ಆನೆಗಳಿಗೆ 'ಬ್ರೇಕ್' ಮೂಲಕ ಅಂಕುಶ!
ಮೇಲ್ಜಾತಿಯ ಹಿಂದುಳಿದವರಿಗೂ ಕೋಟಾ: ಮಾಯಾ ಆಗ್ರಹ
ಜಾತಿಯೊಂದೇ ಮಾನದಂಡವಲ್ಲ: ಸು.ಕೋ
ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ: ಅರ್ಜುನ್
ಹಕ್ಕಿಜ್ವರ: ತ್ರಿಪುರಾದಲ್ಲಿ ಕಟ್ಟೆಚ್ಚರ