ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಿದ್ದು, ನಾಗಾಲೋಟದಿಂದ ಓಡುತ್ತಿರುವ ಹಣದುಬ್ಬರದ ಕುರಿತು ವಿವರಣೆ ನೀಡುವ ಸಂಕಷ್ಟದಲ್ಲಿ ಕೇಂದ್ರಸರಕಾರವಿದೆ. ವಿರೋಧ ಪಕ್ಷಗಳು ಇದನ್ನೊಂದು ಅಸ್ತ್ರವಾಗಿಸಿಕೊಂಡು ಟೀಕಾಸ್ತ್ರಗಳನ್ನು ಎಸೆಯುತ್ತಿರುವಾಗಲೇ, ಸರಕಾರದ ಅಂಗಪಕ್ಷವಾಗಿರುವ ಎಡಪಕ್ಷಗಳೇ ಸರಕಾರವನ್ನು ದೂಷಿಸುತ್ತಿವೆ.
ಈ ಮಟ್ಟದ ಹಣದುಬ್ಬರಕ್ಕೆ ಜಾಗತಿಕ ವಿದ್ಯಮಾನಗಳು ಕಾರಣ ಎಂದು ಹೇಳಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಾಲ್, ಆದರೂ, ಬೆಲೆಗಳ ಇಳಿತಕ್ಕೆ ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಹೇಳಿದ್ದಾರೆ.
ಆದರೆ ಈ ವಾದವನ್ನು ಒಪ್ಪದ ಎಡಪಕ್ಷಗಳು ಬೆಲೆ ಏರಿಕೆಗೆ ಆಹಾರಪದಾರ್ಥಗಳ ಕೊರತೆ ಕಾರಣ ಎಂದು ದೂರಿವೆ.
"ನಮ್ಮ ಅಗತ್ಯವಸ್ತುಗಳಿಗೆ ಜಾಗತಿಕ ಅವಕಾಶಕ್ಕೆ ಸರಕಾರ ಅವಕಾಶ ನೀಡಿರುವುದೇ ಇದಕ್ಕೆ ಕಾರಣ. ಇದನ್ನು ತಡೆಯದಿದ್ದರೆ, ಹಣದುಬ್ಬರ ತಡೆಯಲು ಸಾಧ್ಯವಿಲ್ಲ. ಮತ್ತು ಸರಕಾರಕ್ಕೆ ಅದರದ್ದೇ ಆದ ಅನುಭವವಿದೆ" ಎಂದು ಸಿಪಿಐ(ಎಂ) ನಾಯಕ ಸೀತಾರಾಂ ಯಚೂರಿ ಹೇಳಿದ್ದಾರೆ.
ಹಣದುಬ್ಬರಕ್ಕೆ ಜಾಗತಿಕ ವಿದ್ಯಮಾನಗಳು ಕಾರಣ ಎಂದು ಸರಕಾರ ಹೇಳುತ್ತಿದ್ದರೂ, ಕರ್ನಾಟಕದ ಮಟ್ಟಿಗೆ, ಇದರ ಪರಿಣಾಮ ಸ್ಥಳೀಯವಾಗಿರುತ್ತದೆ!
|