ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಯೋಧ್ಯೆ ಚಳುವಳಿ ಚಾಲ್ತಿಯಲ್ಲಿದೆ: ಆಡ್ವಾಣಿ
PIB
ತನ್ನ ಆತ್ಮಚರಿತ್ರೆಯಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದ ಕುರಿತು ಸಂತಾಪ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ, ವಿಪಕ್ಷ ನಾಯಕ ಲಾಲ್ ಕೃಷ್ಣ ಆಡ್ವಾಣಿ, ಅಯೋಧ್ಯೆ ಚಳುವಳಿ ಇನ್ನೂ ಚಾಲ್ತಿಯಲ್ಲಿದೆ ಎಂದು ಹೇಳಿದ್ದಾರೆ.

ಝೀ ನ್ಯೂಸ್‌ಗೆ ನೀಡಿರುವ ಸಂದರ್ಶದಲ್ಲಿ ಮಾತನಾಡಿರುವ ಅವರು ಅಯೋಧ್ಯೆ ವಿಚಾರವು ಎಂದಿಗೂ ಕೊನೆಗೊಳ್ಳದು ಎಂದಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿರುವ ಆಡ್ವಾಣಿ, ಜಗತ್ತಿನಾದ್ಯಂತ ಗಮನ ಸೆಳೆದಿರುವ ನಾಯಕ ಮೋದಿ ಎಂದು ಶ್ಲಾಘಿಸಿದ್ದಾರೆ. ಮೋದಿಯವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಮೇಲೆ ಗಮನ ಹರಿಸಲು ಇಚ್ಛಿಸಿದ ಆಡ್ವಾಣಿ, ಮೋದಿಯವರ ಪ್ರಯತ್ನಗಳು ಶ್ಲಾಘನಾರ್ಹ ಎಂದು ಕೊಂಡಾಡಿದರು.

ಗುಜರಾತಿನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬಂದಿರುವುದು ಅವರನ್ನು ಹೆಚ್ಚಿನ ಜನತೆ ಸ್ವೀಕರಿಸಿರುವುದನ್ನು ಸೂಚಿಸುತ್ತದೆ ಎಂದು ಆಡ್ವಾಣಿ ನುಡಿದರು. ಮೋದಿ ಕೇಂದ್ರದತ್ತ ಸಾಗಲಿದ್ದಾರೆಯೇ ಎಂದು ಕೇಳಲಾಗಿರುವ ಪ್ರಶ್ನೆಗೆ ಉತ್ತರಿಸಿದ ಅವರು ಇದಕ್ಕೆ ಕಾಲವೇ ಉತ್ತರಿಸಲಿದೆ ಎಂದು ನುಣುಚಿಕೊಂಡರು. ತನ್ನ ಆತ್ಮ ಚರಿತ್ರೆಯಲ್ಲಿ ಮೋದಿಯನ್ನು ಆಡ್ವಾಣಿಯವರು ಯಥೇಚ್ಛವಾಗಿ ಹೊಗಳಿದ್ದಾರೆ.
ಮತ್ತಷ್ಟು
ರಾಜ್ಯ ಚುನಾವಣೆಯನ್ನು ಕಾಡಲಿರುವ ಹಣದುಬ್ಬರ
ಬೋಯಿಂಗ್ ಪೂರೈಕೆ ವಿಳಂಬದಿಂದಾಗಿ ಆಧುನೀಕರಣಕ್ಕೆ ಅಡ್ಡಿ
ಯುಪಿಎ ಸರಕಾರದ ವೈಫಲ್ಯದ ಫಲ ಹಣದುಬ್ಬರ
ಓಡುವ ಆನೆಗಳಿಗೆ 'ಬ್ರೇಕ್' ಮೂಲಕ ಅಂಕುಶ!
ಮೇಲ್ಜಾತಿಯ ಹಿಂದುಳಿದವರಿಗೂ ಕೋಟಾ: ಮಾಯಾ ಆಗ್ರಹ
ಜಾತಿಯೊಂದೇ ಮಾನದಂಡವಲ್ಲ: ಸು.ಕೋ