ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಕಾಂಗ್ರೆಸ್ ಗಂಭೀರ ಪ್ರಯತ್ನ ಮಾಡುವುದು ಎಂದು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಜಮ್ಮುವಿನಲ್ಲಿ ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಮಹಿಳಾ ಅಭ್ಯುದಯಕ್ಕೆ ಸರಕಾರವು ಬದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಗೃಹ ಹಿಂಚಾರ ವಿರೋಧಿ ಮಸೂದೆಯನ್ನು ಅಂಗೀಕರಿಸಿದೆ ಎಂದು ನುಡಿದರು.
ಜಮ್ಮು ನಗರದ ಹೊರವಲಯದಲ್ಲಿರುವ ಅತ್ಯಂತ ದೊಡ್ಡ ಪುರ್ಕೂ ಕಾಶ್ಮೀರಿ ವಲಸಿತರ ಶಿಬಿರಕ್ಕೆ ಭೇಟಿನೀಡಿದರು. ರಾಜ್ಯ ಮತ್ತು ಲೋಕಸಭಾ ಚುನಾವಣೆಗಳಿಗಾಗಿ ಸೋನಿಯಾ ಜಮ್ಮುವಿನಿಂದ ಪ್ರಚಾರ ಆರಂಭಿಸಲಿದ್ದಾರೆ ಎಂದು ಹೇಳಿರುವ ಅಖಿಲ ಭಾರತೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಠಾಕೂರ್, ಅವರು ಜಮ್ಮು ಕಾಶ್ಮೀರವನ್ನು ಚುನಾವಣಾ ಪ್ರಚಾರದ ಆರಂಭಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಶುಕ್ರವಾರ ಹೇಳಿದ್ದರು.
|