ವಾಶಿಂಗ್ಟನ್: ವಿಶ್ವ ಅಭಿವೃದ್ಧಿ ಸೂಚ್ಯಂಕಗಳ ಪ್ರಕಾರ ಜಾಗತಿಕ ಆರ್ಥಿಕತೆಯಲ್ಲಿ ಭಾರತವು ನಾಲ್ಕನೆ ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಟ್ಟು ರಾಷ್ಟ್ರೀಯ ಆದಾಯದ ಆಧಾರದಲ್ಲಿ ಈ ಲೆಕ್ಕಾಚಾರ ಮಾಡಲಾಗಿದ್ದು, ಆರ್ಥಿಕ ಹಿಂಜರಿತದ ನಡುವೆಯೂ ಅಮೆರಿಕ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದರೆ, ಚೀನ ದ್ವಿತೀಯ ಸ್ಥಾನದಲ್ಲಿದೆ.
ಈ ಪಟ್ಟಿಯಲ್ಲಿ ಭಾರತ ಮತ್ತು ಚೀನವು ಮೊದಲ ಐದರ ಸ್ಥಾನದಲ್ಲಿದ್ದು, ಅಭಿವೃದ್ಧಿಪರ ರಾಷ್ಟ್ರಗಳು ಜಾಗತಿಕ ಉತ್ಪಾದನೆಯ ಶೇ.42ರಷ್ಟು ಉತ್ಪಾದನೆಯನ್ನು ಮಾಡುತ್ತಿವೆ. 2000ದ ಗಣತಿಯ ಪ್ರಕಾರ ಇವುಗಳ ಒಟ್ಟು ಉತ್ಪನ್ನ ಶೇ.36 ಆಗಿತ್ತು. ಉನ್ನತ ಐದರಲ್ಲಿ ಎರಡು ಅಭಿವೃದ್ಧಿಶೀಲ ರಾಷ್ಟ್ರಗಳಿದ್ದರೆ, ಮೇಲ್ಮಟ್ಟದಲ್ಲಿ ಇನ್ನೂ ಮೂರು ರಾಷ್ಟ್ರಗಳಿವೆ ಎಂದು ವಿಶ್ವ ಬ್ಯಾಂಕಿನ ದತ್ತಾಂಶ ವಿಭಾಗದ ಯೋಜನಾ ವ್ಯವಸ್ಥಾಪಕ ಎರಿಕ್ ಸ್ವಾನ್‌ಸನ್ ಹೇಳಿದ್ದಾರೆ.
ನೆರವು ನೀಡುವಿಕೆಯ ಚಿತ್ರಣವೂ ತ್ವರಿತವಾಗಿ ಬದಲಾಗುತ್ತಿದ್ದು, ಸಾಂಪ್ರದಾಯಿಕ ದೇಣಿಗೆಗಾರರು ಅಭಿವೃದ್ಧಿ ಸಹಾಯ ದನ ನೀಡಿಕೆಯಲ್ಲಿ ಪ್ರಭುತ್ವ ಹೊಂದಿದ್ದರೂ, ಚೀನ ಮತ್ತು ಭಾರತದಂತಹ ರಾಷ್ಟ್ರಗಳು ದೇಣಿಗೆ ನೀಡುವಂತಹ ರಾಷ್ಟ್ರಗಳಾಗುತ್ತಿವೆ ಎಂದು ವಿಶ್ವ ಅಭಿವೃದ್ಧಿ ಸೂಚ್ಯಂಕ ಹೇಳಿದೆ.
|