ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧ್ವನಿ ಎತ್ತಲು ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಪ್ರತಿಭಾ ಕರೆ
PTI
ವಿಶ್ವಸಂಸ್ಥೆಯ ಸುಧಾರಣೆಗಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಧ್ವನಿ ಎತ್ತಬೇಕು ಎಂದು ಕರೆ ನೀಡಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಈ ಮೂಲಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಬಹುದಾಗಿದೆ ಎಂದು ಹೇಳಿದ್ದಾರೆ.

ಬ್ರೆಜಿಲ್, ಮೆಕ್ಸಿಕೊ ಹಾಗೂ ಚಿಲಿಗಳಿಗೆ ತನ್ನ ಪ್ರಥಮ ಪ್ರವಾಸ ಹಮ್ಮಿಕೊಂಡಿರುವ ಪ್ರತಿಭಾ, ಭಯೋತ್ಪಾದನೆ, ಹವಮಾನ ಬದಲಾವಣೆ ಹಾಗೂ ವಿಶ್ವಸಂಸ್ಥೆಯ ಸುಧಾರಣೆ ಸೇರಿದಂತೆ ಸಮಾನ ಸವಾಲುಗಳ ಕುರಿತು ಭಾರತವು ಈ ಮೂರು ರಾಷ್ಟ್ರಗಳೊಂದಿಗೆ ತನ್ನ ಕಾಳಜಿಯನ್ನು ಹಂಚಿಕೊಡಿದೆ ಎಂದು ಅವರು ಹೇಳಿದ್ದಾರೆ.

ತನ್ನ ಮೂರು ದಿನಗಳ ಪ್ರವಾಸದ ವೇಳೆ ಜತೆಯಲ್ಲಿರುವ ಪತ್ರಕರ್ತರೊಂದಿಗೆ ವಿಮಾನದಲ್ಲಿ ಮಾತನಾಡುತ್ತಿದ್ದ ಪ್ರತಿಭಾ ಅವರು ಅಭಿವೃದ್ಧಿಶೀಲ ರಾಷ್ಟ್ರಗಳು ಮುಂದೆ ಬಂದು ವಿಶ್ವಸಂಸ್ಥೆಯ ಸುಧಾರಣೆಗೆ ಧ್ವನಿ ಎತ್ತಬೇಕು ಎಂದು ನುಡಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸ್ಥಾನಕ್ಕೆ ಬ್ರೆಜಿಲ್ ಅಭ್ಯರ್ಥಿತನವನ್ನು ಭಾರತ ಬೆಂಬಲಿಸುವುದೇ ಎಂಬುದಾಗಿ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅವರು, ಬ್ರೆಜಿಲ್, ಜರ್ಮನಿ ಮತ್ತು ಜಪಾನ್ ವಿಶ್ವಸಂಸ್ಥೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನುಡಿದರು.
ಮತ್ತಷ್ಟು
ಗುಜರಾತ್ ಅಧಿವೇಶನದಲ್ಲಿ ಸಮಯ ಪೋಲಾಗಿಲ್ಲ!
ವಿಶ್ವ ಆರ್ಥಿಕತೆಯ ಅಗ್ರ ಪಟ್ಟಿಯಲ್ಲಿ ಭಾರತ, ಚೀನ
ಮಹಿಳಾ ಮೀಸಲಾತಿ: ಸೋನಿಯಾ ಆಶ್ವಾಸನೆ
ಅಯೋಧ್ಯೆ ಚಳುವಳಿ ಚಾಲ್ತಿಯಲ್ಲಿದೆ: ಆಡ್ವಾಣಿ
ರಾಜ್ಯ ಚುನಾವಣೆಯನ್ನು ಕಾಡಲಿರುವ ಹಣದುಬ್ಬರ
ಬೋಯಿಂಗ್ ಪೂರೈಕೆ ವಿಳಂಬದಿಂದಾಗಿ ಆಧುನೀಕರಣಕ್ಕೆ ಅಡ್ಡಿ