ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಹುಲ್ ಪ್ರಧಾನಿಯಾಗಲು ಎನ್‌ಸಿಪಿ ಅಡ್ಡಿಯಿಲ್ಲ
PTI
ಮುಂಬರುವ 2009ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಅವರ ಪುತ್ರ ರಾಹುಲ್ ಗಾಂಧಿಯವರನ್ನು ಪ್ರಧಾನಿ ಸ್ಥಾನಕ್ಕೆ ಬೆಂಬಲಿಸಲು ಎನ್‌ಸಿಪಿ ಸಿದ್ಧವಿದೆ ಎಂದ ಶರದ್ ಪವಾರ್ ನೈತೃತ್ವದ ಎನ್‌ಸಿಪಿ ಹೇಳಿದೆ.

ಯುಪಿಎಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದೆ. ಅದು ನಾಳೆ ಕಾಂಗ್ರೆಸ್ ಸೋನಿಯಾ ಗಾಂಧಿ ಅಥವಾ ರಾಜೀವ್ ಗಾಂಧಿಯನ್ನು ಪ್ರಧಾನಿಯಾಗಿಸುವ ನಿರ್ಧಾರ ಮಾಡಿದಲ್ಲಿ, ಅದು ಎನ್‌ಸಿಪಿಯ ನಿರ್ಧಾರಿಸಬೇಕಿರುವ ಪ್ರಶ್ನೆಯಲ್ಲ ಎಂದು ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ ಪ್ರಫುಲ್ ಪಟೇಲ್ ಹೇಳಿದ್ದಾರೆ.

ನಾಗರಿಕ ವಿಮಾನಯಾನ ಸಚಿವರಾಗಿರುವ ಪಟೇಲ್ ಅವರು, ನಾಲ್ಕು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಹುದ್ದೆಗೆ ಸೊನಿಯಾಗೆ ತಮ್ಮ ಪಕ್ಷ ಬೆಂಬಲ ನೀಡಿರುವುದಾಗಿ ನುಡಿದರು. ಕಾಂಗ್ರೆಸ್ ನೇತೃತ್ವದ ಪ್ರಧಾನಿ ಸ್ಥಾನದ ಅಭ್ಯರ್ಥಿ ಆಯ್ಕೆಯು ನಮ್ಮ ಸಲಹೆ ಪಡೆಯ ಬೇಕಾದ ಅಗತ್ಯದ ವಿಚಾರವೇನಲ್ಲ ಎಂದು ಅವರು ಸಿಎನ್ಎನ್-ಐಬಿಎನ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸ್ಫರ್ಧಿಸಬೇಕು ಎಂದು ಕೇಂದ್ರ ಆಹಾರ ಹಾಗೂ ಕೃಷಿ ಸಚಿವ ಶರದ್ ಪವಾರ್ ಸಲಹೆ ಮಾಡಿದ್ದಾರೆ.

ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಅಭ್ಯರ್ಥಿಯಾದಲ್ಲಿ ಎನ್‌ಸಿಪಿ ಬೆಂಬಲಿಸುವುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಟೇಲ್, "ಯುಪಿಎ ಬಹುಮತ ಗಳಿಸಿ, ಕಾಂಗ್ರೆಸ್ ಈ ಆಯ್ಕೆ ಮಾಡಿದಲ್ಲಿ ಈ ಪ್ರಶ್ನೆ ಯಾಕೆ, ಈ ವಿಚಾರದಲ್ಲಿ ಚರ್ಚಿಸಬೇಕಿರುವುದೇನಿದೆ" ಎಂದವರು ಮರುಪ್ರಶ್ನಿಸಿದರು.
ಮತ್ತಷ್ಟು
ಧ್ವನಿ ಎತ್ತಲು ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಪ್ರತಿಭಾ ಕರೆ
ಗುಜರಾತ್ ಅಧಿವೇಶನದಲ್ಲಿ ಸಮಯ ಪೋಲಾಗಿಲ್ಲ!
ವಿಶ್ವ ಆರ್ಥಿಕತೆಯ ಅಗ್ರ ಪಟ್ಟಿಯಲ್ಲಿ ಭಾರತ, ಚೀನ
ಮಹಿಳಾ ಮೀಸಲಾತಿ: ಸೋನಿಯಾ ಆಶ್ವಾಸನೆ
ಅಯೋಧ್ಯೆ ಚಳುವಳಿ ಚಾಲ್ತಿಯಲ್ಲಿದೆ: ಆಡ್ವಾಣಿ
ರಾಜ್ಯ ಚುನಾವಣೆಯನ್ನು ಕಾಡಲಿರುವ ಹಣದುಬ್ಬರ