ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಹಾರದ 8 ಮಂತ್ರಿಗಳಿಗೆ ಅರ್ಧಚಂದ್ರ
PIB
ಉತ್ತಮ ಕಾರ್ಯಕ್ಷಮತೆ ತೋರದ ಎಂಟು ಸಚಿವರಿಗೆ ರಾಜೀನಾಮೆ ನೀಡಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒತ್ತಾಯಿಸಿರುವುದಾಗಿ ಅಧಿಕೃತ ಮೂಲಗಳು ಹೇಳಿವೆ.

ತನ್ನ ಮಂತ್ರಿಮಂಡಲ ವಿಸ್ತರಣೆಯ ಹಿನ್ನೆಲೆಯಲ್ಲಿ, ಎಂಟು ಸಚಿವರಿಗೆ ರಾಜೀನಾಮೆ ಸಲ್ಲಿಸಲು ಶನಿವಾರ ರಾತ್ರಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಂದಿನಿಂದ ತನ್ನ ಸರಕಾರದ ಉತ್ತಮ ಇಮೇಜ್ ಪ್ರತಿಬಿಂಬಿಸಲು ಯತ್ನಿಸುತ್ತಿರುವ ನಿತೀಶ್, ಮೊನಜೀರ್ ಹಸನ್, ರಾಮೇಶ್ವರ್ ಪಾಸ್ವಾನ್, ಬೈದನಾಥ್ ಮಹತೊ. ಅರ್ಜುನ್ ರೈ. ಮಂಜರ್ ಅಲಮ್, ವಿಶ್ವಮೋಹನ್ ಕುಮಾರ್, ಅಜಿತ್ ಕುಮಾರ್ ಮತ್ತು ಸುಚಿತ್ರ ಸಿನ್ಹಾ ಅವರುಗಳು ಸಂಪುಟ ತೊರೆಯುವಂತೆ ಹುಕುಂ ಮಾಡಿದ್ದಾರೆ.

ನವೆಂಬರ್ 2005ರಲ್ಲಿ ಸರಕಾರ ಅಸ್ತಿತ್ವಕ್ಕೆ ಬಂದಿರುವ ಎನ್‌ಡಿಎ ಸರಕಾರದ ಪ್ರಥಮ ವಿಸ್ತರಣೆ ಇದಾಗಿದ್ದು, ಹೊಸ ಮುಖಗಳ ಸೇರ್ಪಡೆ ನಿರೀಕ್ಷಿಸಲಾಗಿದೆ.

ಮಂಗಳವಾರ ಅಥವಾ ಬುಧವಾರ ವಿಸ್ತರಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಬಿಜೆಪಿ ಪಕ್ಷದ ಮಂತ್ರಿಗಳು ತಮ್ಮ ರಾಜೀನಾಮೆಯನ್ನು ಉಪಮುಖ್ಯಮಂತ್ರಿ ಸುಶಿಲ್ ಕುಮಾರ್ ಮೋದಿಯವರಿಗೆ ಸಲ್ಲಿಸಿದರೆ, ಜೆಡಿ-ಯು ಮಂತ್ರಿಗಳು ನಿತೀಶ್ ಕುಮಾರ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ.
ಮತ್ತಷ್ಟು
ರಾಹುಲ್ ಪ್ರಧಾನಿಯಾಗಲು ಎನ್‌ಸಿಪಿ ಅಡ್ಡಿಯಿಲ್ಲ
ಧ್ವನಿ ಎತ್ತಲು ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಪ್ರತಿಭಾ ಕರೆ
ಗುಜರಾತ್ ಅಧಿವೇಶನದಲ್ಲಿ ಸಮಯ ಪೋಲಾಗಿಲ್ಲ!
ವಿಶ್ವ ಆರ್ಥಿಕತೆಯ ಅಗ್ರ ಪಟ್ಟಿಯಲ್ಲಿ ಭಾರತ, ಚೀನ
ಮಹಿಳಾ ಮೀಸಲಾತಿ: ಸೋನಿಯಾ ಆಶ್ವಾಸನೆ
ಅಯೋಧ್ಯೆ ಚಳುವಳಿ ಚಾಲ್ತಿಯಲ್ಲಿದೆ: ಆಡ್ವಾಣಿ