ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಕಾರ್ಲೆಟ್ ದೇಹದಿಂದ ಕಿಡ್ನಿ, ಗರ್ಭಾಶಯ ನಾಪತ್ತೆ!
ಬ್ರಿಟಿಷ್ ತರುಣಿ ಸ್ಕಾರ್ಲೆಟ್ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದ್ದು, ಆಕೆಯ ದೇಹದ ಪ್ರಧಾನ ಅಂಗಗಳು ಕಾಣೆಯಾಗಿರುವ ಆಘಾತಕಾರಿ ಅಂಶವೊಂದು ಮೂರನೇ ಮರಣೋತ್ತರ ಪರೀಕ್ಷೆ ವೇಳೆ ಬಯಲಾಗಿದೆ.

ಸ್ಕಾರ್ಲೆಟ್ ಮೃತದೇಹವನ್ನು ಮಾರ್ಚ್ 30ರಂದು ಲಂಡನ್‌ಗೆ ಒಯ್ಯಲಾಗಿತ್ತು. ಅಲ್ಲಿ ಮತ್ತೊಂದು ವೈಜ್ಞಾನಿಕ ಪರೀಕ್ಷೆಗೊಳಪಡಿಸಿದಾಗ ವಿಷಯ ಬಯಲಾಗಿರುವುದಾಗಿ ಸ್ಕಾರ್ಲೆಟ್ ತಾಯಿ ಫಿಯೊನಾ ಮೆಕಿಯೋನ್ ಅವರ ವಕೀಲರು ತಿಳಿಸಿದ್ದಾರೆ.

ಇದರೊಂದಿಗೆ ಈಗಾಗಲೇ ಗೋವಾ ಪೊಲೀಸರ ಪ್ರಾಮಾಣಿಕತೆ ಕಳಂಕ ತಂದ ಪ್ರಕರಣವು, ಗೋವಾದ ಫಾರೆನ್ಸಿಕ್ ತಜ್ಞರ ಮೇಲೂ ಕಪ್ಪು ಚುಕ್ಕೆ ತಂದಿಟ್ಟಿದ್ದು, ಮಾದಕ ದ್ರವ್ಯ ಜಾಲದ ಜತೆಯಲ್ಲಿ ಅಂಗಾಂಗ ಕಳವು ಜಾಲವೂ ಭಾಗಿಯಾಗಿರುವ ಶಂಕೆಯೊಂದು ಹುಟ್ಟಿಕೊಂಡಿದೆ.

ಸ್ಕಾರ್ಲೆಟ್ ದೇಹಗದಿಂದ ಉದರ, ಕಿಡ್ನಿಗಳು ಮತ್ತು ಗರ್ಭಾಶಗಳು ಕಾಣೆಯಾಗಿರುವುದನ್ನು ಡೇವನ್‌ಶೈರ್‌ನ ಕೊರೊನರ್ ನ್ಯಾಯಾಲಯವು ಮೂರನೇ ಮರಣೋತ್ತರ ಪರೀಕ್ಷೆ ವೇಳೆ ಕಂಡುಕೊಂಡಿದೆ ಎಂದು ವಕೀಲ ವಿಕ್ರಮ್ ವರ್ಮಾ ತಿಳಿಸಿದ್ದಾರೆ.

ವಿಷಯ ತಿಳಿದ ಸ್ಕಾರ್ಲೆಟ್ ತಾಯಿ ಫಿಯೋನಾ ತೀವ್ರ ಆಘಾತಗೊಂಡಿದ್ದಾರೆ. ಶೀಘ್ರವೇ ಮತ್ತೆ ಭಾರತಕ್ಕೆ ಬರುವುದಾಗಿ ಆಕೆ ಹೇಳಿದ್ದಾರೆ.
ಮತ್ತಷ್ಟು
ಬಿಹಾರದ 8 ಮಂತ್ರಿಗಳಿಗೆ ಅರ್ಧಚಂದ್ರ
ರಾಹುಲ್ ಪ್ರಧಾನಿಯಾಗಲು ಎನ್‌ಸಿಪಿ ಅಡ್ಡಿಯಿಲ್ಲ
ಧ್ವನಿ ಎತ್ತಲು ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಪ್ರತಿಭಾ ಕರೆ
ಗುಜರಾತ್ ಅಧಿವೇಶನದಲ್ಲಿ ಸಮಯ ಪೋಲಾಗಿಲ್ಲ!
ವಿಶ್ವ ಆರ್ಥಿಕತೆಯ ಅಗ್ರ ಪಟ್ಟಿಯಲ್ಲಿ ಭಾರತ, ಚೀನ
ಮಹಿಳಾ ಮೀಸಲಾತಿ: ಸೋನಿಯಾ ಆಶ್ವಾಸನೆ