ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಖಂಡಿಸಿ ಎಡಪಕ್ಷಗಳ ಜಾಥಾ
ಕೊಲ್ಕತ್ತಾ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಎಡಪಕ್ಷಗಳು ಬುಧವಾರ ಪ್ರದರ್ಶನ ನಡೆಸಲು ನಿರ್ಧರಿಸಿವೆ. ಏರುತ್ತಿರುವ ಹಣದುಬ್ಬರವು ಮುಂಬರುವ ಚುನಾವಣೆಯಲ್ಲಿ ಮೈತ್ರಿಯ ಮೇಲೆ ಪರಿಣಾಮ ಬೀರಲಿದೆ ಎಂದು ಎಡಪಕ್ಷಗಳು ಯುಪಿಎ ಸರಕಾರಕ್ಕೆ ಎಚ್ಚರಿಕೆ ನೀಡಿವೆ.

"ಬೆಲೆಏರಿಕೆಯು ಅತ್ಯಂತ ಪ್ರಮುಖ ವಿಚಾರವಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ಯುಪಿಎ ಸರಕಾರದ ಕತ್ತಿನ ಮೇಲೆ 'ಅಲ್ಬಟ್ರೋಸ್ ಕುಳಿತಂತೆ' (ಅಲ್ಬಟ್ರೋಸ್ ಅಂದರೆ ಒಂದು ದೊಡ್ಡ ಜಾತಿಯ ಸಮುದ್ರ ಪಕ್ಷಿ) ಆಗಲಿದೆ. ಒಂದು ಬೆಂಬಲಿಗ ಪಕ್ಷವಾಗಿದ್ದುಕೊಂಡು ನಾವು ಯುಪಿಎ ತೊಂದರೆಗೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ" ಎಂದು ಸಿಪಿಐ-ಎಂ ಪಾಲಿಟ್‌ಬ್ಯೂರೋ ಅಧ್ಯಕ್ಷ ಸೀತಾರಾಮ ಯಚೂರಿ ಹೇಳಿದ್ದಾರೆ. ಹಣದುಬ್ಬರ ಹಾಗೂ ಆರ್ಥಿಕತೆಯ ಮೇಲೆ ಅದರ ಪರಿಣಾಮ ಎಂಬ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅವರು ಮಾತನಾಡತ್ತಿದ್ದರು.

"ಜಾಥಾವೇಳೆ ಪೊಲೀಸರು ನಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದ ಯಚೂರಿ, ಸಂಸತ್ತಿಗೆ ಜಾಥಾವು ಸಂಸದರ ಪ್ರತಿಭಟನೆಯ ಸಹಜ ವಿಧಾನವಲ್ಲ. ಆದರೆ ನಮಗೆ ಬೇರೆ ಆಯ್ಕೆ ಇಲ್ಲ" ಎಂದು ಹೇಳಿದರು. ಅಗತ್ಯ ವಸ್ತುಗಳ ಬೆಲೆ ಕಡಿತ ಮತ್ತು ಹಣದುಬ್ಬರಕ್ಕೆ ಕಡಿವಾಣ ಹಾಕುವಂತೆ ಯುಪಿಎ ಸರಕಾರದ ವಿರುದ್ಧ ಹಮ್ಮಿಕೊಂಡಿರುವ ರಾಷ್ಚ್ರವ್ಯಾಪಿ ಮುಷ್ಕರದಂಗವಾಗಿ ಸಂಸತ್ತಿಗೆ ಮೆರವಣಿಗೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಕೊನೆಕ್ಷಣದ ತನಕವೂ ಏನೂ ತಿಳಿದಿರಲಿಲ್ಲ
ಮಾಜಿ ಕೋಚ್ ಹತ್ಯೆ: ಬುಧಿಯಾ ಸಿಂಗ್ ರೋದನ
43 ವರ್ಷ ಬಳಿಕ ಬಾಂಗ್ಲಾ-ಭಾರತ ಬೆಸೆದ 'ಮೈತ್ರಿ' ಎಕ್ಸ್‌ಪ್ರೆಸ್
ಮೇ 20ರಿಂದ ಮಹಾರಾಷ್ಟ್ರದಲ್ಲಿ ಗುಟ್ಕಾ ನಿಷೇಧ
ಸ್ಕಾರ್ಲೆಟ್ ದೇಹದಿಂದ ಕಿಡ್ನಿ, ಗರ್ಭಾಶಯ ನಾಪತ್ತೆ!
ಬಿಹಾರದ 8 ಮಂತ್ರಿಗಳಿಗೆ ಅರ್ಧಚಂದ್ರ