ವಡೋದರ: ಇಲ್ಲಿಗೆ ಸಮೀಪದ ಬೊಡೇಲಿ ಎಂಬಲ್ಲಿ ಬಸ್ಸೊಂದು ನರ್ಮದಾ ನದಿಗೆ ಉರುಳಿದ್ದು, ಕನಿಷ್ಠ ಪಕ್ಷ 44 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಬುಧವಾರ ನಸುಕಿನಲ್ಲಿ ಸಂಭವಿಸಿದೆ. ಮೃತರಲ್ಲಿ ಹೆಚ್ಚಿನವರು ಶಾಲಾಮಕ್ಕಳು.
ಗುಜರಾತ್ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಸುಮಾರು 60 ಶಾಲಾ ಮಕ್ಕಳು ಮತ್ತು ಶಿಕ್ಷಕರು ಪ್ರಯಾಣಿಸುತ್ತಿದ್ದರು. ಸೇತುವೆ ಮೇಲೆ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬಸ್ಸು ನದಿಗೆ ಉರುಳಿತು ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಬಸ್ಸಿನಲ್ಲಿ ಎಂಟು ಮತ್ತು ಒಂಭತ್ತನೆಯ ತರಗತಿಯ ಮಕ್ಕಳು ಪ್ರಯಾಣಿಸುತ್ತಿದ್ದು, ಇವರೆಲ್ಲ ವಾರ್ಷಿಕ ಪರೀಕ್ಷೆಗೆ ತೆರಳುತ್ತಿದ್ದರು. ಇದುವರೆಗೆ ನಾಲ್ಕು ಮಕ್ಕಳನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಪ್ರಗತಿಯಲ್ಲಿದೆ. 20 ಡೈವರ್‌ಗಳು ಕಾರ್ಯನಿರತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತರಾದವರ ಕುಟುಂಬಿಕರಿಗೆ ಸರಕಾರ ಒಂದು ಲಕ್ಷ ಪರಿಹಾರ ಘೋಷಿಸಿದೆ. ದುರ್ಘಟನೆಯ ಕುರಿತು ಉನ್ನತಟ್ಟದ ತನಿಖೆಗೆ ಸರಕಾರ ಆದೇಶ ನೀಡಿದೆ.
|