ಪ್ರಿಯಾಂಕಾ ಗಾಂಧಿ ನೀಡಿರುವ ಭಾವನಾತ್ಮಕ ಭೇಟಿಯ ಬಳಿಕ ತನ್ನ ಪಾಪ ತೊಳೆದು ಹೋಯಿತು ಎಂದು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೀಡಾಗಿರುವ ನಳಿನಿ ಶ್ರೀಹರನ್ ಹೇಳಿದ್ದಾಳೆ.
ಪ್ರಿಯಾಂಕಾ ಗಾಂಧಿ ಮಾರ್ಚ್ 19ರಂದು ವೆಲ್ಲೂರು ಜೈಲಿನಲ್ಲಿರುವ ನಳಿನಿಯನ್ನು ಖಾಸಗಿಯಾಗಿ ಭೇಟಿ ನಡೆಸಿದ್ದು, ತನ್ನ ತಂದೆಯ ಹತ್ಯೆ ಹಿಂದಿನ ಕಾರಣವೇನು ಎಂದು ತಿಳಿಯ ಬಯಸಿದ್ದರು. ತನ್ನ ಜೀವನ ಕಂಡಿರುವ ಹಿಂಸೆಯ ಜಾಗದಲ್ಲಿ ಶಾಂತಿಗಾಗಿ ನಾನು ಈ ಭೇಟಿಯನ್ನು ಮಾಡಿರುವುದಾಗಿ ಪ್ರಿಯಾಂಕ ಹೇಳಿಕೊಂಡಿದ್ದಾರೆ.
ಪ್ರಿಯಾಂಕ ಗಾಂಧಿ ತನ್ನನ್ನು ಭೇಟಿ ಮಾಡಿದ ಬಳಿಕ, ತನ್ನ ಪಾಪ ತೊಳೆದು ಹೋಯಿತು ಎಂದು ನಳಿನಿ ಹೇಳಿದ್ದಳು ಎಂಬುದಾಗಿ ಆಕೆಯ ಸಹೋದರ ಭಾಗ್ಯನಾಥನ್ ಹೇಳಿದ್ದಾನೆ.
ಪ್ರಿಯಾಂಕ ಮತ್ತು ನಳಿನಿಯ ಭೇಟಿಯು ಪೂರ್ವನಿಗದಿಯ ಬಳಿಕ ನಡೆದಿತ್ತು ಎಂಬ ಮಾಧ್ಯಮ ವರದಿಗಳಿಗೆ ವ್ಯತಿರಿಕ್ತ ಎಂಬಂತೆ, ಇದೊಂದು ಅಚ್ಚರಿಯ ಭೇಟಿ ಎಂದು ಭಾಗ್ಯರಾಜ್ ಹೇಳಿದ್ದು, ಈ ಭೇಟಿ ನಡೆಯುವ ತನಕವೂ ಈ ಕುರಿತು ತಿಳಿದಿರಲಿಲ್ಲ ಎಂದು ನುಡಿದಿರುವದಾಗಿ ವರದಿ ತಿಳಿಸಿದೆ.
|