ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾಗೆ ಸೆಡ್ಡು ಹೊಡೆದ ರಾಹುಲ್
ದಲಿತ ಗ್ರಾಮಕ್ಕೆ ಹಠಾತ್ ಭೇಟಿ
ಕಾಂಗ್ರೆಸ್ ಪಕ್ಷವು ದಲಿತ ವಿರೋಧಿ ಎಂಬುದಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹೇಳಿರುವ ಮರುದಿನದಂದೇ, ಎಐಸಿಸಿ ಕಾರ್ಯದರ್ಶಿ ರಾಹುಲ್ ಗಾಂಧಿ ಜಾನ್ಸಿಯ ದಲಿತ ಗ್ರಾಮಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿದ್ದಾರೆ.

ಕೆಲವು ವಾರಗಳ ಹಿಂದೆ ಇತಾವದಲ್ಲಿನ ದಲಿತ ಕುಟುಂಬವೊಂದನ್ನು ಭೇಟಿಮಾಡಿದ ಬಳಿಕ ಇದೀಗ ರಾಹುಲ್ ಅವರು ದಲಿತ ಗ್ರಾಮವೊಂದಕ್ಕೆ ಪ್ರಥಮ ಭೇಟಿ ನೀಡಿದ್ದಾರೆ.

ದಲಿತ ಮತಬ್ಯಾಂಕಿಗಾಗಿ ಉತ್ತರ ಪ್ರದೇಶದ ಆಡಳಿತಾರೂಢ ಬಿಎಸ್ಪಿ ಮತ್ತು ಕಾಂಗ್ರೆಸ್ ನಡುವೆ ತಿಕ್ಕಾಟ ನಡೆಯುತ್ತಿದ್ದು, ರಾಜೀವ್ ಗಾಂಧಿಯವರ ದಲಿತ ಪ್ರೇಮವೊಂದು 'ಶುದ್ಧ ತಮಾಷೆ' ಎಂಬುದಾಗಿ ಮಾಯಾವತಿ ಮಂಗಳವಾರ ರಾತ್ರಿ ವ್ಯಂಗ್ಯವಾಡಿದ್ದರು.

ಕಾಂಗ್ರೆಸ್ ದಲಿತ ವಿರೋಧಿ ಎಂದು ಹೇಳಿದ್ದ ಮಾಯಾವತಿ, ಪ್ರತಿಬಾರಿಯೂ ದಲಿತರ ಮನೆಗೆ ತೆರಳಿದ ಬಳಿಕ ರಾಹುಲ್ ಗಾಂಧಿ, ವಿಶೇಷ ಸಾಬೂನಿನಿಂದ ಸ್ನಾನ ಮಾಡುತ್ತಾರೆ ಮತ್ತು ತನ್ನನ್ನು ಶುದ್ಧೀಕರಣ ಮಾಡಿಕೊಳ್ಳುತ್ತಾರೆ ಎಂದು ಕಟಕಿಯಾಡಿದ್ದರು.

ಕಾನ್ಪುರ ಸಮಾವೇಶದಲ್ಲಿ ರಾಹುಲ್, ಮಯಾಯವತಿಯವರ ದಲಿತ ಕಾಳಜಿಯನ್ನು ಪ್ರಶ್ನಿಸಿದ್ದರು.

ಕಾಂಗ್ರೆಸ್ ಸೇರಿದಂತೆ ಕಳೆದ 19 ವರ್ಷಗಳಲ್ಲಿ ರಾಜ್ಯವಾಳಿದ ಎಲ್ಲ ಪಕ್ಷಗಳು ರಾಜ್ಯ ಹಿಂದುಳಿದಿರುವಿಕೆಗೆ ಕಾರಣ ಎಂದು ಆಪಾದಿಸಿದ್ದರು. ಬುಂದೇಲ್‌ಖಂಡ್‌ನ ಅನಾವೃಷ್ಠಿ ಪರಿಸ್ಥಿತಿಯ ವೀಕ್ಷಣೆಗೆ ತೆರಳಲು ರಾಹುಲ್ ತೆರಳಿದ್ದ ದಿನವೇ ಮಾಯಾವತಿ ಹೇಳಿಕೆ ಹೊರಬಿದ್ದಿದೆ. ಬಂದೇಲ್‌ಖಂಡ್ ಮಾಯಾವತಿಯವರ ತವರು ಜಿಲ್ಲೆ.
ಮತ್ತಷ್ಟು
ಪ್ರಿಯಾಂಕಾ ಭೇಟಿಯಿಂದ ಪಾಪ ಕಳೆಯಿತು: ನಳಿನಿ
ಬಸ್ಸು ನದಿಗೆ ಉರುಳಿ ಕನಿಷ್ಠ 44 ಸಾವು
ನಳಿನಿ ಭೇಟಿಯನ್ನು ಒಪ್ಪಿಕೊಂಡ ಪ್ರಿಯಾಂಕಾ
ಕಲರ್ ಟಿವಿ ಆಮಿಷ ವಿರುದ್ಧ ತ.ನಾ ವಕೀಲರ ದೂರು
ಬೆಲೆಏರಿಕೆ ಬಿಸಿ: ಸಂಸತ್ತು ಮುಂದೂಡಿಕೆ
ಹಣದುಬ್ಬರ ಖಂಡಿಸಿ ಎಡಪಕ್ಷಗಳ ಜಾಥಾ