ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ನಿಯಂತ್ರಣ, ಅಭಿವೃದ್ಧಿ ಏಕಕಾಲದಲ್ಲಿ ಸಾಧ್ಯವಿಲ್ಲ: ಚಿದು
PTI
ಹಣದುಬ್ಬರ ನಿಯಂತ್ರಣ ಮತ್ತು ದೃಢ ರಾಷ್ಟ್ರೀಯ ಅಭಿವೃದ್ಧಿ ಜತೆಜತೆಗೆ ಸಾಗಲಾರವು ಎಂದು ಹಣಕಾಸು ಸಚಿವ ಪಿ.ಚಿದಂಬರಂ ಬುಧವಾರ ಹೇಳಿದ್ದಾರೆ. ಬೆಲೆ ಏರಿಕೆ ವಿಚಾರ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆಗೆ ಮಾತನಾಡಿದ ಚಿದಂಬರಂ ಹಣದುಬ್ಬರ ನಿಯಂತ್ರಣ ಮತ್ತು ಅಭಿವೃದ್ಧಿ ಎರಡೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹಣಕಾಸು ಪೂರೈಕೆಯ ಬಿಗಿಗೊಳಿಸುವಿಕೆಯು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಹುದು ಎಂಬುದಾಗಿ ಬಿಜೆಪಿಯ ಮುರಳಿ ಮನೋಹರ್ ಜೋಷಿಯವರು ಕಾಂಗ್ರೆಸ್‌ನ ಜೆ.ಪಿ. ಕುರಿಯನ್ ಅವರಿಗೆ ಪ್ರತ್ಯುತ್ತರ ನೀಡಿದ ವೇಳೆ ಮಧ್ಯಪ್ರವೇಶ ಮಾಡಿರುವ ಹಣಕಾಸು ಸಚಿವರು, ಆರ್ಥಿಕತೆಯಿಂದ ಹೆಚ್ಚುವರಿ ಹಣದ ಹರಿವನ್ನು ಹೀರುವಂತಹ ಕ್ರಮಗಳು ಮತ್ತು ಸುದೃಢ ರಾಷ್ಟ್ರೀಯ ಅಭಿವೃದ್ಧಿ ಜತೆಜತೆಯಾಗಿ ಸಾಗಲು ಸಾಧ್ಯವಿಲ್ಲ ಎಂದು ನುಡಿದರು.

ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಆರ್‌ಬಿಐ ಎಂಟು ಬಾರಿ ನಗದು ಮೀಸಲು ದರವನ್ನು ಪರಿಷ್ಕರಿಸಿದೆ ಎನ್ನುವ ಮೂಲಕ, ರಾಜ್ಯಸಭೆಯಲ್ಲಿ ಕುರಿಯನ್ ಅವರು ಬೆಲೆ ಏರಿಕೆ ಕುರಿತ ವಿಚಾರದಲ್ಲಿ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದರು.

ಹಣದುಬ್ಬರ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಅಭಿವೃದ್ಧಿಯನ್ನು ಸ್ವಲ್ಪಮಟ್ಟಿಗೆ ತ್ಯಾಗ ಮಾಡಬೇಕಾಗಿ ಬರಬಹುದು ಎಂದು ಚಿದಂಬರಂ ಇತ್ತೀಚೆಗೆ ಹೇಳಿಕೆ ನೀಡಿದ್ದರು, ಮತ್ತು ಈ ಕ್ರಮಕ್ಕೆ ಮುಂದಾಗಲು ಸರಕಾರ ಹಿಂಜರಿಯದು ಎಂದೂ ಅವರು ಹೇಳಿದ್ದರು.

ಆರ್‌ಬಿಐ ತನ್ನ ವಾರ್ಷಿಕ ನಗದು ಮೀಸಲು ದರವನ್ನು ಏಪ್ರಿಲ್ 29ರಂದು ಘೋಷಿಸಲಿದೆ. ಹಣದುಬ್ಬರವು ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಶೇ.7.4ರಷ್ಟು ಏರಿರುವ ಹಿನ್ನೆಲೆಯಲ್ಲಿ, ಅರ್ಥಶಾಸ್ತ್ರಜ್ಞರು ನಗದು ಮೀಸಲು ದರದ ನಿರೀಕ್ಷೆಯಲ್ಲಿದ್ದಾರೆ. ಹಣದುಬ್ಬರದ ಈ ಪರಿಯ ಏರಿಕೆಯು ಕೇಂದ್ರ ಸರಕಾರವನ್ನು ರಾಜಕೀಯ ಮತ್ತು ಸಾರ್ವಜನಿಕ ಒತ್ತಡತಕ್ಕೆ ತಳ್ಳಿದೆ.
ಮತ್ತಷ್ಟು
ಮಾಯಾಗೆ ಸೆಡ್ಡು ಹೊಡೆದ ರಾಹುಲ್
ಪ್ರಿಯಾಂಕಾ ಭೇಟಿಯಿಂದ ಪಾಪ ಕಳೆಯಿತು: ನಳಿನಿ
ಬಸ್ಸು ನದಿಗೆ ಉರುಳಿ ಕನಿಷ್ಠ 44 ಸಾವು
ನಳಿನಿ ಭೇಟಿಯನ್ನು ಒಪ್ಪಿಕೊಂಡ ಪ್ರಿಯಾಂಕಾ
ಕಲರ್ ಟಿವಿ ಆಮಿಷ ವಿರುದ್ಧ ತ.ನಾ ವಕೀಲರ ದೂರು
ಬೆಲೆಏರಿಕೆ ಬಿಸಿ: ಸಂಸತ್ತು ಮುಂದೂಡಿಕೆ