ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಲಂಪಿಕ್ ಜ್ಯೋತಿ: ಭದ್ರಕೋಟೆಯಾದ ದೆಹಲಿ
ದೆಹಲಿಯಲ್ಲಿ ನಡೆಯಲಿರುವ ಒಲಿಂಪಿಕ್ ಕ್ರಿಡಾ ಜ್ಯೋತಿಯ ರಾಲಿಯ ಹಿನ್ನೆಲೆಯಲ್ಲಿ ಯಾವುದೇ ಸಂಭಾವ್ಯ ಗಲಭೆಯನ್ನು ತಡೆಯಲು ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸರು ದೆಹಲಿಯನ್ನು ಭದ್ರಕೋಟೆಯಾಗಿ ಪರಿವರ್ತಿಸಿದ್ದಾರೆ.

ಸಶಸ್ತ್ರಧಾರಿ ಕ್ಷಿಪ್ರಕ್ರಿಯಾ ಪಡೆಯ ಸದಸ್ಯರೂ ಸೇರಿದಂತೆ, ದೊಡ್ಡಸಂಖ್ಯೆಯ ಭದ್ರತಾ ಸಿಬ್ಬಂದಿಗಳನ್ನು ಲಿ ಮೆರೆಡಿಯನ್ ಹೋಟೇಲಿನ ಬಳಿ ನಿಯೋಜಿಸಲಾಗಿದೆ. ಇಲ್ಲಿ ಜ್ಯೋತಿಯನ್ನು ಇರಿಸಲಾಗಿದೆ ಎಂದು ಹೇಳಲಾಗಿದೆ. ಏತನ್ಮಧ್ಯೆ, ನಸುಕಿಗೂ ಮುಂಚಿನ ಅವಧಿಯಲ್ಲಿ ಟಿಬೇಟಿಯನ್ನರು ಪ್ರತಿಭಟನೆ ಆರಂಭಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 15,000 ಅರೆಸೇನಾ ಪಡೆಯನ್ನು ದೆಹಲಿ ನಗರದಾದ್ಯಂತ ನಿಯೋಜಿಸಲಾಗಿದೆ. ಜ್ಯೋತಿ ತೆರಳಲಿರುವ ರಾಜ್‌ಪಥ್ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಟಿಬೆಟಿಯನ್ನರು ಜ್ಯೋತಿ ರಾಲಿಗೆ ಅಡ್ಡಿಯುಂಟುಮಾಡುವುದನ್ನು ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

2.3ಕಿಲೋ ಮೀಟರ್ ರಾಜ್‌ಪಥ್ ರಸ್ತೆಯಲ್ಲಿ ಜ್ಯೋತಿ ಸಾಗಲಿದ್ದು, 47 ಕ್ರೀಡಾಪಟುಗಳು ಸೇರಿದಂತೆ 70 ಸೆಲೆಬ್ರಿಟಿಗಳು ಬಿಗಿ ಭದ್ರತೆ ನಡುವೆ ಒಲಿಂಪಿಕ್ ಜ್ಯೋತಿ ಹಿಡಿದು ಓಡಲಿದ್ದಾರೆ.
ಮತ್ತಷ್ಟು
ಹಣದುಬ್ಬರ ಕಡಿತಕ್ಕೆ ಕಠಿಣ ಕ್ರಮ:ಸರಕಾರ
ಬೆಲೆ ಏರಿಕೆ ವಿರುದ್ಧ ಲೋಕಸಭೆಯಲ್ಲಿ ಕೋಲಾಹಲ
ವಡೋದರ ಅಪಘಾತ: 41 ದೇಹ ಪತ್ತೆ
ಹಣದುಬ್ಬರ ನಿಯಂತ್ರಣ, ಅಭಿವೃದ್ಧಿ ಏಕಕಾಲದಲ್ಲಿ ಸಾಧ್ಯವಿಲ್ಲ: ಚಿದು
ಮಾಯಾಗೆ ಸೆಡ್ಡು ಹೊಡೆದ ರಾಹುಲ್
ಪ್ರಿಯಾಂಕಾ ಭೇಟಿಯಿಂದ ಪಾಪ ಕಳೆಯಿತು: ನಳಿನಿ