ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.7.14ಕ್ಕೆ ಇಳಿದ ಹಣದುಬ್ಬರ: 0.27 ಇಳಿಕೆ
WD
ರಾಷ್ಟ್ರದಲ್ಲಿ ಹಾಹಾಕಾರವೆಬ್ಬಿಸಿದ, ನಾಗಲೋಟದ ಏರುಮುಖ ಕಂಡಿದ್ದ ಹಣದುಬ್ಬದರದಲ್ಲಿ ಕೊಂಚ ಇಳಿಕೆ ಕಂಡಿದ್ದು, ಏಪ್ರಿಲ್ 5ಕ್ಕೆ ಕೊನೆಗೊಂಡವಾರದಲ್ಲಿ ಹಣದುಬ್ಬರ ದರ ಶೇ7.14 ದಾಖಲಾಗಿದೆ.

ಇದಕ್ಕೂ ಮುಂಚಿನ ವಾರದಲ್ಲಿ 7.41 ದಾಖಲಾಗಿದ್ದು, 2004ರ ನವೆಂಬರ್ ಬಳಿಕ ಗರಿಷ್ಠ ಮಟ್ಟದ ಹಣದುಬ್ಬರದ ದರ ಏರಿಕೆ ಅದಾಗಿತ್ತು. ಇದರಿಂದಾಗಿ ಯುಪಿಎ ಸರಕಾರ ತನ್ನ ಮಿತ್ರರು, ವಿರೋಧಿಗಳೆನ್ನದೆ ತೀವ್ರ ಟೀಕೆಗೆ ಗುರಿಯಾಗಿದೆ.

ಎಂಟು ವಾರಗಳ ಸತತ ಏರಿಕೆಯ ಬಳಿಕ, ಹಣದುಬ್ಬರ ದರದಲ್ಲಿ ಇಳಿಕೆಯಾಗಿದೆಯಾದರೂ, ಆರ್‌ಬಿಐನ ಸಾಂತ್ವಾನ ದರ ಶೇ.5ಕ್ಕಿಂತ ತುಂಬ ಹೆಚ್ಚಿನ ಮಟ್ಟದಲ್ಲಿದೆ.

ಹಣದುಬ್ಬರ ಕಡಿತಕ್ಕೆ ಸಾಧ್ಯಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ವಿತ್ತಸಚಿವ ಚಿದಂಬಂರಂ ಬುಧವಾರವಷ್ಟೆ ರಾಜ್ಯಸಭೆಯಲ್ಲಿ ಹೇಳಿದ್ದರು. ಹಣಕಾಸು, ವಿತ್ತೀಯ ಹಾಗೂ ಪೂರೈಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ ಸಚಿವರು, ಈ ಕುರಿತು ಕ್ರಮಕ್ಕೆ ಮುಂದಾಗಲು ರಾಜ್ಯಗಳಿಗೆ ಕರೆನೀಡಿದ್ದರು. ಅಲ್ಲಗೆ, ಅಗತ್ಯ ವಸ್ತುಗಳ ಕಾಯ್ದೆಯಡಿ, ಕಾಳಸಂತೆಕೋರರಿಗೆ ಮತ್ತು ಅಕ್ರಮ ದಾಸ್ತಾನಿಗರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅವರು ಹೇಳಿದ್ದರು.

ಅಗತ್ಯವಸ್ತುಗಳ ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ತಡೆಯಲು ಸರಕಾರವು ಕಂದಾವನ್ನು ತ್ಯಾಗಮಾಡಲೂ ಹಿಂಜರಿಯದು ಎಂದು ಸಚಿವ ಚಿದಂಬರಂ ಹೇಳಿದ್ದರು.
ಮತ್ತಷ್ಟು
ಒಲಂಪಿಕ್ ಜ್ಯೋತಿ: ಭದ್ರಕೋಟೆಯಾದ ದೆಹಲಿ
ಹಣದುಬ್ಬರ ಕಡಿತಕ್ಕೆ ಕಠಿಣ ಕ್ರಮ:ಸರಕಾರ
ಬೆಲೆ ಏರಿಕೆ ವಿರುದ್ಧ ಲೋಕಸಭೆಯಲ್ಲಿ ಕೋಲಾಹಲ
ವಡೋದರ ಅಪಘಾತ: 41 ದೇಹ ಪತ್ತೆ
ಹಣದುಬ್ಬರ ನಿಯಂತ್ರಣ, ಅಭಿವೃದ್ಧಿ ಏಕಕಾಲದಲ್ಲಿ ಸಾಧ್ಯವಿಲ್ಲ: ಚಿದು
ಮಾಯಾಗೆ ಸೆಡ್ಡು ಹೊಡೆದ ರಾಹುಲ್