ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಜೈಲಿನಲ್ಲಿ 641 ಭಾರತೀಯರು
ನವದೆಹಲಿ: ಪಾಕಿಸ್ತಾನದ ವಿವಿಧ ಜೈಲುಗಳಲ್ಲಿ 641 ಭಾರತೀಯರು ಬಂಧಿಗಳಾಗಿದ್ದಾರೆ ಎಂದು ಸರಕಾರ ಹೇಳಿದೆ. ಇವರಲ್ಲಿ 436 ಮಂದಿ ಮೀನುಗಾರರು.

ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡುತ್ತಿದ್ದ, ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಈ ವಿಷಯ ತಿಳಿಸಿದ್ದು, ಪಾಕಿಸ್ತಾನದ ವಶದಲ್ಲಿರುವ ಭಾರತೀಯರ ವಿಚಾರದ ಕುರಿತು ಇಸ್ಲಾಮಾಬಾದ್ ಜತೆ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.

1971ರಿಂದ ಕಾಣೆಯಾಗಿರುವ 74 ರಕ್ಷಣಾ ಸಿಬ್ಬಂದಿಗಳು ಪಾಕಿಸ್ತಾನ ಜೈಲಿನಲ್ಲಿದ್ದಾರೆ ಎಂದು ನಂಬಲಾಗಿದೆ ಎಂದು ಅವರು ತಿಳಿಸಿದರು. ಉಭಯ ರಾಷ್ಟ್ರಗಳಲ್ಲಿರುವ ಕೈದಿಗಳ ಕುರಿತು ಪಟ್ಟಿಗಳನ್ನು ಮಾರ್ಚ್ 31ರಂದು ವಿನಿಮಯ ಮಾಡಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.

ಪಾಕಿಸ್ತಾನ ಜೈಲಿನಲ್ಲಿರುವ ಮೀನುಗಾರರು ಮತ್ತು ಇತರ ಕೈದಿಗಳಿಗೆ ರಾಯಭಾರ ಕಚೇರಿಯ ಸಂಪರ್ಕ ಅಲಭ್ಯವಾದರೆ, ಅವರಿಗೆ ವಿಧಿಸಲಾಗಿರುವ ಶಿಕ್ಷೆಯ ಪ್ರಮಾಣವನ್ನು ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಪ್ರಣಬ್ ನುಡಿದರು.
ಮತ್ತಷ್ಟು
ಶೇ.7.14ಕ್ಕೆ ಇಳಿದ ಹಣದುಬ್ಬರ: 0.27 ಇಳಿಕೆ
ಒಲಂಪಿಕ್ ಜ್ಯೋತಿ: ಭದ್ರಕೋಟೆಯಾದ ದೆಹಲಿ
ಹಣದುಬ್ಬರ ಕಡಿತಕ್ಕೆ ಕಠಿಣ ಕ್ರಮ:ಸರಕಾರ
ಬೆಲೆ ಏರಿಕೆ ವಿರುದ್ಧ ಲೋಕಸಭೆಯಲ್ಲಿ ಕೋಲಾಹಲ
ವಡೋದರ ಅಪಘಾತ: 41 ದೇಹ ಪತ್ತೆ
ಹಣದುಬ್ಬರ ನಿಯಂತ್ರಣ, ಅಭಿವೃದ್ಧಿ ಏಕಕಾಲದಲ್ಲಿ ಸಾಧ್ಯವಿಲ್ಲ: ಚಿದು