ಮೆಘಾಲಯದ ರಾಜಧಾನಿ ಶಿಲ್ಲಾಂಗ್ ಮತ್ತು ಅಸ್ಸಾಂಮಿನ ಕೆಲವು ಭಾಗದಲ್ಲಿ ಗುರುವಾರ ನಸುಕಿನಲ್ಲಿ ಲಘು ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ.
ಅಸ್ಸಾಂಮಿನ ಮೊರಿಗಾವ್ ಮತ್ತು ಶಿಲ್ಲಾಂಗ್ ಪ್ರದೇಶದಲ್ಲಿ ಭೂಕಂಪನ ಉಂಟಾಗಿದ್ದು, ಇದರ ತೀವ್ರತೆ ರಿಕ್ಟರ್ ಮಾಪನದಲ್ಲಿ 4.3 ಆಗಿತ್ತು ಎಂದು ಕೇಂದ್ರೀಯ ಭೂಗರ್ಭ ಕೇಂದ್ರದ ಅಧಿಕಾರಗಳು ತಿಳಿಸಿದ್ದಾರೆ. ಭೂಕಂಪನದಿಂದಾಗಿ ಯಾವುದೇ ಪ್ರಾಣಹಾನಿ ಮತ್ತು ಆಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಭಾರತದ ಈಶಾನ್ಯ ಭಾಗವು ಪ್ರದೇಶ ಅತೀ ಹೆಚ್ಚು ಕಂಪನದ ಪ್ರದೇಶವಾಗಿದ್ದು, ಇಲ್ಲಿ ಭೂಕಂಪ ಸಂಭವಿಸುವುದು ಸಹಜ ಎಂದು ಅಧಿಕಾರಿಗಳು ಹೇಳಿದ್ದಾರೆ.
|