ನವದೆಹಲಿಯಲ್ಲಿ ಒಲಂಪಿಕ್ ಜ್ಯೋತಿ ಓಟ ಕಾರ್ಯಕ್ಕೆ ಬಿಗಿಭದ್ರತೆ ಆಯೋಜಿಸಲಾಗಿದ್ದರೂ, ಒಲಂಪಿಕ್ ಜ್ಯೋತಿ ರಾಲಿ ವಿರೋಧಿಸಿ ನೂರಕ್ಕೂ ಹೆಚ್ಚು ಟಿಬೆಟಿಯನ್ನರು ಮುಂಬೈನ ನರಿಮನ್ ಪಾಯಿಂಟ್‌ನಲ್ಲಿರುವ ಚೀನ ದೂತವಾಸ ಕಾರ್ಯಾಲಯದೆದುರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ತೊಡಗಿದ್ದ ಸುಮಾರು 50 ಜನ ಪ್ರತಿಭಟನಾಕಾರರನ್ನು ಪೊಲೀಸರು ಕಾನೂನು ಬಾಹಿರವಾಗಿ ಸೇರಿರುವ ಆರೋಪದಲ್ಲಿ ಬಂಧಿಸಿದ್ದಾರೆ.
ನವದೆಲಿಯಲ್ಲಿ ಆಯೋಜಿಸಿರುವ ಒಲಿಂಪಿಕ್ ಜ್ಯೋತಿ ಓಟ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರವುದಾಗಿ ಟಿಬೆಟ್ ಯೂತ್ ಕಾಂಗ್ರೆಸ್(ಟಿವೈಸಿ) ಕಾರ್ಯಕರ್ತ ದೋರ್ಜೆ ತಿಳಿಸಿದ್ದಾರೆ. ಟಿಬೆಟ್ ಮೇಲೆ ಚೀನ ಸರಕಾರದ ಹಿಡಿತ ವಿರೋಧಿಸಿ, ಟಿಬೆಟ್‌ಗೆ ಸಂವಿಧಾನಿಕ ಹಕ್ಕನ್ನು ನೀಡುವಂತೆ ಒತ್ತಾಯಿಸಿ ಟಿಬೆಟಿಯನ್ನರು ಜಗತ್ತಿನಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಭಾರತದ ಹಲವು ಭಾಗದಲ್ಲಿ ಪ್ರತಿಭಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟಿವೈಸಿ ಕಾರ್ಯಕರ್ತರು ತಿಳಿಸಿದರು.
|